HomeIndiaದೆಹಲಿಯ ಮೊಘಲ್ ಗಾರ್ಡನ್ಸ್ ಗೆ 'ಅಮೃತ್ ಉದ್ಯಾನ್' ಎಂದು ಮರುನಾಮಕರಣ ಮಾಡಿದ ಸರ್ಕಾರ

ದೆಹಲಿಯ ಮೊಘಲ್ ಗಾರ್ಡನ್ಸ್ ಗೆ ‘ಅಮೃತ್ ಉದ್ಯಾನ್’ ಎಂದು ಮರುನಾಮಕರಣ ಮಾಡಿದ ಸರ್ಕಾರ

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಅನ್ನು ಕೇಂದ್ರ ಸರ್ಕಾರ ಶನಿವಾರ “ಅಮೃತ್ ಉದ್ಯಾನ್” ಎಂದು ಮರುನಾಮಕರಣ ಮಾಡಿದೆ.

ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಗುರುತಿಸುವ ‘ಅಮೃತ ಮಹೋತ್ಸವ’ದ ಥೀಮ್‌ ಗೆ ಅನುಗುಣವಾಗಿ ಕೇಂದ್ರ ಸರ್ಕಾರ ಮೊಘಲ್ ಗಾರ್ಡನ್ಸ್ ಹೆಸರನ್ನು ಅಮೃತ್ ಉದ್ಯಾನ್ ಎಂದು ಬದಲಾಯಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪ ಪತ್ರಿಕಾ ಕಾರ್ಯದರ್ಶಿ ನಾವಿಕಾ ಗುಪ್ತಾ ಮಾತನಾಡಿ, ಸ್ವಾತಂತ್ರ್ಯದ 75 ವರ್ಷಗಳನ್ನು ‘ಆಜಾದಿ ಕಾ ಅಮೃತ್ ಮಹೋತ್ಸವ’ವಾಗಿ ಆಚರಿಸುವ ಸಂದರ್ಭದಲ್ಲಿ, ರಾಷ್ಟ್ರಪತಿ ಭವನದ ಉದ್ಯಾನಕ್ಕೆ ಅಮೃತ್ ಉದ್ಯಾನ ಎಂದು ಹೆಸರಿಡಲಾಗಿದ್ದು, ಅಮೃತ್ ಉದ್ಯಾನವನ್ನು ದ್ರೌಪದಿ ಮುರ್ಮು ಅವರು ಜನವರಿ 29 ರ ಭಾನುವಾರದಂದು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ..

ಜನವರಿ 31 ರಿಂದ ಮಾರ್ಚ್ 26 ರವರೆಗೆ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ತೆರೆದಿರುತ್ತದೆ.  ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಎರಡು ತಿಂಗಳ ಅವಧಿಯನ್ನು ಹೊರತುಪಡಿಸಿ, ರೈತರು ಮತ್ತು ವಿಕಲಚೇತನರಂತಹ ವಿಶೇಷ ಗುಂಪುಗಳ ವೀಕ್ಷಣೆಗೆ ಉದ್ಯಾನವನ್ನು ಮುಕ್ತವಾಗಿಡಲು ಸರ್ಕಾರ ಯೋಜಿಸಿದೆ ಎಂದು ನಾವಿಕಾ ಗುಪ್ತಾ ಹೇಳಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular