HomeBusinessಅಗತ್ಯ ಔಷಧಿಗಳ ಬೆಲೆ ಮತ್ತೆ ಹೆಚ್ಚಿಸಿದ ಸರ್ಕಾರ: ಇದು ‘ಅತ್ಯಲ್ಪ’ ಏರಿಕೆ ಎಂದು ಸ್ಪಷ್ಟನೆ

ಅಗತ್ಯ ಔಷಧಿಗಳ ಬೆಲೆ ಮತ್ತೆ ಹೆಚ್ಚಿಸಿದ ಸರ್ಕಾರ: ಇದು ‘ಅತ್ಯಲ್ಪ’ ಏರಿಕೆ ಎಂದು ಸ್ಪಷ್ಟನೆ

ನವದೆಹಲಿ: ಅಗತ್ಯ ಔಷಧಿಗಳ ಬೆಲೆ ಹೆಚ್ಚಳವಾಗಿದ್ದು, ಈ ವಾರದ ಆರಂಭದಲ್ಲಿ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರವು(NPPA) 2024–25ರ ಆರ್ಥಿಕ ವರ್ಷದ ಆರಂಭದಿಂದ ಅಗತ್ಯ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆಯಲ್ಲಿ(MRP) ಈ ವರ್ಷ 0.00551% ಹೆಚ್ಚಳವನ್ನು ಜಾರಿಗೊಳಿಸಿದೆ.

ಫಾರ್ಮಾಸ್ಯುಟಿಕಲ್ಸ್ ಇಲಾಖೆಯು 923 ನಿಗದಿತ ಔಷಧಳಿಗೆ ಪರಿಷ್ಕೃತ ಬೆಲೆಗಳ ವಾರ್ಷಿಕ ಪಟ್ಟಿಯನ್ನು ಮತ್ತು 65 ಫಾರ್ಮುಲೇಶನ್‌ಗಳಿಗೆ ಪರಿಷ್ಕೃತ ಚಿಲ್ಲರೆ ಬೆಲೆಗಳನ್ನು ಬಿಡುಗಡೆ ಮಾಡಿದೆ. ಸೀಲಿಂಗ್ ದರಗಳು ಏಪ್ರಿಲ್ 1 ರಿಂದ ಜಾರಿಗೆ ಬರಲಿವೆ. ಕೇಂದ್ರ ಸರ್ಕಾರದ ಬೆಲೆ ಹೊಂದಾಣಿಕೆ ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಯಲ್ಲಿನ ಏರಿಳಿತಗಳಿಗೆ ಕಾರಣವಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 1996 ರಲ್ಲಿ 279 ಔಷಧಿಗಳನ್ನು ಒಳಗೊಂಡಿರುವ ಭಾರತದ ಅಗತ್ಯ ಔಷಧಿಗಳ ಮೊದಲ ರಾಷ್ಟ್ರೀಯ ಪಟ್ಟಿಯನ್ನು ತಯಾರಿಸಿ ಬಿಡುಗಡೆ ಮಾಡಿತು. ಪ್ರಸ್ತುತ, ಭಾರತವು ಸರಿಸುಮಾರು 400 Molecules, 960 Formulations ಗಳನ್ನು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಅಡಿಯಲ್ಲಿ ಒಳಗೊಂಡಿದೆ. ಈ ಔಷಧಿಗಳ ತಯಾರಕರು ವಾರ್ಷಿಕವಾಗಿ 10% ಕ್ಕಿಂತ ಹೆಚ್ಚು MRP ಅನ್ನು ಹೆಚ್ಚಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅನಿವಾರ್ಯವಲ್ಲದ ಔಷಧಿಗಳ ಬೆಲೆಗಳನ್ನು ಸರ್ಕಾರವು ಮೇಲ್ವಿಚಾರಣೆ ಮಾಡುತ್ತದೆ. ಸಗಟು ಬೆಲೆ ಸೂಚ್ಯಂಕ(ಡಬ್ಲ್ಯುಪಿಐ) ಆಧರಿಸಿ ನಿಗದಿತ ಸೂತ್ರೀಕರಣಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು(ಎಂಆರ್‌ಪಿ) ಸರ್ಕಾರದ ಪೂರ್ವಾನುಮತಿಯಿಲ್ಲದೆ ಹೆಚ್ಚಿಸಲು ತಯಾರಕರಿಗೆ ಅನುಮತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗರಿಷ್ಠ ಮಾರಾಟ ದರ 90 ರೂ.ನಿಂದ 261 ರವರೆಗೆ ಇರುವ 54 ಔಷಧಗಳ ಬೆಲೆಯಲ್ಲಿ ಕೇವಲ ಒಂದು ಪೈಸೆ ಏರಿಕೆ ಆಗಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಮಾಹಿತಿ ನೀಡಿದೆ. 2024- 25ರಲ್ಲಿ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಔಷಧಗಳ ಗರಿಷ್ಠ ಮಾರಾಟ ಬೆಲೆಯಲ್ಲಿ ಬಹುತೇಕ ಯಾವುದೇ ಬದಲಾವಣೆಯಾಗುವುದಿಲ್ಲವೆಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular