ಬೆಂಗಳೂರು : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ವಿಧಾನಸೌಧಕ್ಕೆ ಆಗಮಿಸಿದ್ದು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸ್ವಾಗತ ಕೋರಿದರು. ವಿಧಾನಸೌಧದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಬೇಕಿದ್ದ ರಾಜ್ಯಪಾಲರು ಕೇವಲ ಎರಡೇ ಮಾತಿನಲ್ಲಿ ಭಾಷಣ ಮುಗಿಸಿ ತೆರಳಿದ್ದು, ಸದನದಲ್ಲಿ ಹೈಡ್ರಾಮಾಗೆ ಕಾರಣವಾಯಿತು.
ಹೌದು, ಇಂದು ವಿಧಾನಸೌಧಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಗಮಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಅವರಿಗೆ ಸ್ವಾಗತ ಕೋರಿದ್ದಾರೆ . ಬಳಿಕ ಕೇವಲ ಎರಡೇ ಮಾತಿನಲ್ಲಿ ಭಾಷಣ ಮುಗಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೆರಳಿದ್ದು, ಕಾಂಗ್ರೆಸ್ ನಾಯಕರು ಧಿಕ್ಕಾರ ಕೂಗಿದ್ದಾರೆ.
ಭಾಷಣ ಮಾಡದೇ ಕೇವಲ 2 ಸಾಲಿನಲ್ಲಿ ಮಾತು ಮುಗಿಸಿ ಅವರು ತೆರಳಿದ್ದಾರೆ. ಸರ್ಕಾರ ಕೊಟ್ಟಂತಹ ಭಾಷಣ ಓದದೇ ಕೇವಲ 2 ಮಾತಿನಲ್ಲಿ ಶುಭ ಕೋರಿ ಅವರು ತೆರಳಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ್ದಾರೆ. ಬಿ.ಕೆ ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಭಾಷಣವನ್ನು ಸಂಪೂರ್ಣವಾಗಿ ಓದುವಂತೆ ಆಗ್ರಹಿಸಿದ್ದಾರೆ. ಆದರೆ ಯಾವುದಕ್ಕೂ ಕ್ಯಾರೇ ಎನ್ನದೇ ರಾಜ್ಯಪಾಲರು ಅಲ್ಲಿಂದ ತೆರಳಿದ್ದಾರೆ. ಇದರಿಂದ ಸದನದಲ್ಲಿ ಕಾಂಗ್ರೆಸ್ ನಾಯಕರಿಂದ ಭಾರಿ ಹೈಡ್ರಾಮಾ ನಡೆಯಿತು.

