HomeBusinessಖಾಸಗೀಕರಣಕ್ಕೆ ಬ್ರೇಕ್: 2030ರ ವೇಳೆಗೆ ಸರ್ಕಾರಿ IPOಗಳ ಮೂಲಕ ₹31,500 ಕೋಟಿ ಸಂಗ್ರಹಕ್ಕೆ ಕೇಂದ್ರದ ಬೃಹತ್...

ಖಾಸಗೀಕರಣಕ್ಕೆ ಬ್ರೇಕ್: 2030ರ ವೇಳೆಗೆ ಸರ್ಕಾರಿ IPOಗಳ ಮೂಲಕ ₹31,500 ಕೋಟಿ ಸಂಗ್ರಹಕ್ಕೆ ಕೇಂದ್ರದ ಬೃಹತ್ ಯೋಜನೆ

ನವದೆಹಲಿ: ಕೇಂದ್ರ ಸರ್ಕಾರವು ತನ್ನ ಆರ್ಥಿಕ ಕಾರ್ಯತಂತ್ರದಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡಿದೆ. ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಸಂಪೂರ್ಣವಾಗಿ ಖಾಸಗಿಯವರಿಗೆ ಮಾರುವ (Privatisation) ಬದಲು ಅವುಗಳ ಷೇರುಗಳನ್ನು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡುವ (IPO) ಮೂಲಕ ಬರೋಬ್ಬರಿ ₹1.79 ಲಕ್ಷ ಕೋಟಿ ಸಂಗ್ರಹಿಸಲು ಮುಂದಾಗಿದೆ.

ನೀತಿ ಆಯೋಗವು ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ 2029/30 ರ ಹಣಕಾಸು ವರ್ಷದ ವೇಳೆಗೆ ಈ ಗುರಿಯನ್ನು ತಲುಪಲು ರೋಡ್‌ಮ್ಯಾಪ್ ಸಿದ್ಧಪಡಿಸಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಹಂತದ ಆಸ್ತಿ ನಗದೀಕರಣ (Asset Monetisation) ಯೋಜನೆಯ ಭಾಗವಾಗಿದೆ.

ರೈಲ್ವೆ ಮತ್ತು ಕಲ್ಲಿದ್ದಲು ವಲಯಕ್ಕೆ ಆದ್ಯತೆ
ಮುಂದಿನ ನಾಲ್ಕು ವರ್ಷಗಳಲ್ಲಿ ಸರ್ಕಾರವು ವಿವಿಧ ವಲಯಗಳ ಅಂಗಸಂಸ್ಥೆಗಳನ್ನು ಮಾರುಕಟ್ಟೆಗೆ ಇಳಿಸಲಿದೆ. ಅವುಗಳ ಅಂದಾಜು ಪಟ್ಟಿ ಹೀಗಿದೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲ್ವೆ ಇಲಾಖೆ: ಏಳು ರೈಲ್ವೆ ಕಂಪನಿಗಳ ಐಪಿಒ ಮೂಲಕ ಸುಮಾರು ₹83,700 ಕೋಟಿ ಸಂಗ್ರಹಿಸುವ ಗುರಿ ಇದೆ.

ಕಲ್ಲಿದ್ದಲು ಮತ್ತು ಇಂಧನ: ಕೋಲ್ ಇಂಡಿಯಾ ಅಂಗಸಂಸ್ಥೆಗಳು ಮತ್ತು ಎನ್‌ಎಲ್‌ಸಿ ಇಂಡಿಯಾದ ನವೀಕರಿಸಬಹುದಾದ ಇಂಧನ ಘಟಕಗಳಿಂದ ₹48,300 ಕೋಟಿ ನಿರೀಕ್ಷಿಸಲಾಗಿದೆ.

ವಿದ್ಯುತ್ ವಲಯ: ವಿದ್ಯುತ್ ಕಂಪನಿಗಳ ಸಬ್ಸಿಡಿಯರಿಗಳ ಮಾರಾಟದಿಂದ ₹31,000 ಕೋಟಿ ಬರಲಿದೆ ಎಂದು ಅಂದಾಜಿಸಲಾಗಿದೆ.

ಗ್ಯಾಸ್ ಮತ್ತು ವಿಮಾನಯಾನ: 2027/28ರಲ್ಲಿ ಗೇಲ್ ಗ್ಯಾಸ್ (GAIL GAS) ಕಂಪನಿಯನ್ನು ಲಿಸ್ಟ್ ಮಾಡಲು ಯೋಜಿಸಲಾಗಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರದ (AAI) ಪಾಲನ್ನು ಸಹ ಮಾರಾಟ ಮಾಡಲಾಗುತ್ತದೆ.

ತಂತ್ರ ಬದಲಾಗಿದ್ದು ಏಕೆ?

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದ ಕಾರಣ, ಸಂಪೂರ್ಣ ಖಾಸಗೀಕರಣದ ನಿರ್ಧಾರಗಳಿಂದ ಸರ್ಕಾರ ಹಿಂದೆ ಸರಿದಿದೆ ಎನ್ನಲಾಗುತ್ತಿದೆ. ಈಗಿನ ಯೋಜನೆಯಂತೆ:

ಕಂಪನಿಗಳ ಮೇಲೆ ಸರ್ಕಾರದ ನಿಯಂತ್ರಣ ಹಾಗೆಯೇ ಇರುತ್ತದೆ.

ಅಲ್ಪ ಪ್ರಮಾಣದ ಷೇರು ಮಾರಾಟದಿಂದ ಬರುವ ಹಣವು ನೇರವಾಗಿ ಆಯಾ ಕಂಪನಿಗಳ ಅಭಿವೃದ್ಧಿಗೆ ಬಳಕೆಯಾಗುತ್ತದೆ.

ಇದರಿಂದ ಸರ್ಕಾರದ ಬಜೆಟ್ ಮೇಲಿನ ಹೊರೆ ಕಡಿಮೆಯಾಗುತ್ತದೆ.

ಮುಂದಿನ ವರ್ಷದ ಟಾರ್ಗೆಟ್ ಏನು?
ಬರುವ ಏಪ್ರಿಲ್ 1 ರಿಂದ ಆರಂಭವಾಗುವ ಹೊಸ ಹಣಕಾಸು ವರ್ಷದಲ್ಲಿಯೇ, ರೈಲ್ವೆ ವಲಯದ ಕಂಪನಿಗಳಿಂದ ₹17,000 ಕೋಟಿ ಸಂಗ್ರಹಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಯಾವ ಕಂಪನಿಗಳು ಮೊದಲು ಮಾರುಕಟ್ಟೆಗೆ ಬರಲಿವೆ ಎಂಬ ಹೆಸರನ್ನು ನೀತಿ ಆಯೋಗ ಇನ್ನೂ ಗುಟ್ಟಾಗಿಟ್ಟಿದೆ.ಒಟ್ಟಾರೆಯಾಗಿ ಸರ್ಕಾರಿ ಆಸ್ತಿಗಳನ್ನು ಮಾರುವ ಬದಲು ಅವುಗಳ ಮೌಲ್ಯವರ್ಧನೆ ಮಾಡಿ ಬಂಡವಾಳ ಕ್ರೋಢೀಕರಿಸುವುದು ಸರ್ಕಾರದ ಈ ಹೊಸ ಮಾಸ್ಟರ್ ಪ್ಲಾನ್ ಹಿಂದಿನ ಉದ್ದೇಶವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular