HomeKarnatakaರಾಜ್ಯದ ಜನತೆಗೆ ಬಿಗ್ ಶಾಕ್: ಸಾಲ ಪತ್ರ, ಆಸ್ತಿ ವಿಭಜನೆ ಸೇರಿ ಮುದ್ರಾಂಕ ಶುಲ್ಕ ಭಾರಿ...

ರಾಜ್ಯದ ಜನತೆಗೆ ಬಿಗ್ ಶಾಕ್: ಸಾಲ ಪತ್ರ, ಆಸ್ತಿ ವಿಭಜನೆ ಸೇರಿ ಮುದ್ರಾಂಕ ಶುಲ್ಕ ಭಾರಿ ಏರಿಕೆ

ಬೆಂಗಳೂರು: ಸರ್ಕಾರ ಮುದ್ರಾಂಕ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿದೆ. ಈ ಮೂಲಕ ಬಡವರಿಗೆ ಶಾಕ್ ನೀಡಿದೆ. ಸಾಲ ಪ್ರಮಾಣ ಪತ್ರ, ದಾನ ಪತ್ರ, ಆಸ್ತಿ ವಿಭಜನೆ, ಖುಲಾಸೆ ಪತ್ರ, ಟ್ರಸ್ಟ್ ಗಳ ಪ್ರಮಾಣ ಪತ್ರ, ಕಂಪನಿಗಳ ಷೇರು ಹಂಚಿಕೆ ಪತ್ರ, ಪವರ್ ಆಫ್ ಅಟಾರ್ನಿ ಆಸ್ತಿ ಪತ್ರ ಮೊದಲಾದ ದಾಖಲೆಗಳ ಮೇಲಿನ ಮುದ್ರಾಂಕ ಶುಲ್ಕ ಭಾರಿ ಹೆಚ್ಚಳವಾಗಿದೆ.

20 ರೂ. ಇದ್ದ ಅಫಿಡವಿಟ್ ಶುಲ್ಕ 50 ರೂ.ಗೆ ಹೆಚ್ಚಳ ಮಾಡಲಾಗಿದೆ. ಸಣ್ಣ ಪುಟ್ಟ ಅಫಿಡವಿಟ್ ಗೆ ನೋಟರಿಗೆ 500 ರೂಪಾಯಿವರೆಗೆ ಕೊಡಬೇಕಾಗಬಹುದು. ಪಾರ್ಟಿಷನ್ ಗೂ ಶುಲ್ಕ ಹೆಚ್ಚಳ ಮಾಡಿರುವುದು ದಾಖಲೆಯ ನೋಂದಣಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕುಟುಂಬದೊಳಗೆ ಆಸ್ತಿ ವಿಭಜನೆ ಆದಾಗ ದಾಖಲೆ ಸರಿಪಡಿಸಿಕೊಳ್ಳಬೇಕು. ಆದರೆ ಮುದ್ರಾಂಕ ಶುಲ್ಕ ಹೆಚ್ಚಳದಿಂದ ಇದರ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಶುಲ್ಕ ಇದ್ದರೆ ಜನ ದಾಖಲೆ ಸರಿಪಡಿಸಿಕೊಳ್ಳುತ್ತಾರೆ. ಈ ಹಿಂದೆ 6-7 ಸಾವಿರ ರೂ.ನಲ್ಲಿ ಮುಗಿಯುತ್ತಿದ್ದ ನೋಂದಣಿ ಪ್ರಕ್ರಿಯೆ ಪರಿಷ್ಕೃತ ದರದ ಪ್ರಕಾರ 25 ರಿಂದ 30 ಸಾವಿರ ರೂ. ವರೆಗೆ ಖರ್ಚಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 1000 ರೂ. ಇದ್ದ ಶುಲ್ಕ 5 ಸಾವಿರ ರೂ., ಸಿಎಂಸಿ ವ್ಯಾಪ್ತಿಯಲ್ಲಿ 500 ರೂ. ಇದ್ದ ಶುಲ್ಕ 3 ಸಾವಿರ ರೂ.ವರೆಗೆ ಹೆಚ್ಚಳವಾಗಿದೆ. ಕೃಷಿ ಭೂಮಿಗೆ 250 ರೂ.ನಿಂದ 1000 ರೂ.ಗೆ ಹೆಚ್ಚಳ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಂಕ್ ನಲ್ಲಿ ಗೃಹ ನಿರ್ಮಾಣ ಮೊದಲಾದ ಸಾಲ ಪಡೆಯಲು ಡಿಟಿಡಿ ದರವನ್ನು ಶೇಕಡ 0.2 ರಿಂದ ಶೇಕಡ 0.5ಕ್ಕೆ ಹೆಚ್ಚಳ ಮಾಡಲಾಗಿದ್ದು, ಇದರಿಂದ ಬಡ್ಡಿದರ ಕೂಡ ಹೆಚ್ಚಳವಾಗುತ್ತದೆ.

10 ಲಕ್ಷ ರೂ. ಸಾಲದ ಮೇಲೆ ಶೇಕಡ 0.1 ರಷ್ಟು ಇದ್ದ ಮುದ್ರಾಂಕ ಶುಲ್ಕ ಶೇಕಡ 0.5 ರಷ್ಟು ಆಗಿದೆ. ಅಫಿಡ್ ವಿಟ್ 20ರೂ. ನಿಂದ 100 ರೂ., ಸ್ವಾಧೀನವಿಲ್ಲದ ಮಾರಾಟ ಒಪ್ಪಂದ ಶೇಕಡ 0.1 ರಿಂದ ಶೇಕಡ 0.5ರಷ್ಟು, ಕ್ಯಾನ್ಸಲೇಷನ್ ಡೀಡ್ 100 ರೂ.ನಿಂದ 500 ರೂ., ಮಾರ್ಟ್  ಗೇಜ್ ಗೆ 100 ರೂ.ನಿಂದ 200 ರೂ.ಗೆ ಹೆಚ್ಚಳ ಮಾಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular