ಬೆಂಗಳೂರು : ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಒಟ್ಟು 2000 ಬೋಧಕ ಹುದ್ದೆಗಳ ನೇರ ನೇಮಕಾತಿಗೆ ಉನ್ನತ ಶಿಕ್ಷಣ ಇಲಾಖೆ ಷರತ್ತುಬದ್ಧ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಹೌದು, ಬಜೆಟ್ ನಲ್ಲಿ ಘೋಷಿಸಿದಂತೆ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ನೀಡಿದೆ.
ಎಷ್ಟು ಹುದ್ದೆಗಳ ಭರ್ತಿ.?
• ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು: 825 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು.
• ಪಾಲಿಟೆಕ್ನಿಕ್ ಕಾಲೇಜುಗಳು: 941 ಉಪನ್ಯಾಸಕರ ಹುದ್ದೆಗಳು.
• ಎಂಜಿನಿಯರಿಂಗ್ ಕಾಲೇಜುಗಳು: 186 ಸಹಾಯಕ ಪ್ರಾಧ್ಯಾಪಕ ಹುದ್ದೆಗಳು.
• ಯುವಿಸಿಇ (UVCE): 47 ಬೋಧಕ ಹುದ್ದೆಗಳು.
ನೇಮಕಾತಿ ಹೇಗೆ?
• ಈ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸೂಚಿಸಲಾಗಿದೆ.
• ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅಗತ್ಯ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
• ಕಲ್ಯಾಣ ಕರ್ನಾಟಕ ವೃಂದಕ್ಕೆ ಮೀಸಲಿರುವ ಹುದ್ದೆಗಳನ್ನು ನಿಯಮಾನುಸಾರ ವರ್ಗೀಕರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲು ತಿಳಿಸಲಾಗಿದೆ.
ಷರತ್ತುಗಳು:
ಆರ್ಥಿಕ ಇಲಾಖೆಯ ಸಲಹೆಗಳನ್ವಯ ಈ ನೇಮಕಾತಿಗೆ ಅನುಮತಿ ನೀಡಲಾಗಿದ್ದು, ಯುವಿಸಿಇ (UVCE) ಹುದ್ದೆಗಳ ಭರ್ತಿಗೆ ಮುನ್ನ ಅಲ್ಲಿನ ಖಾಲಿ ಇರುವ ಒಟ್ಟು ಹುದ್ದೆಗಳ ಬಗ್ಗೆ ಪೂರ್ಣ ಮಾಹಿತಿ ಸಲ್ಲಿಸಿ ಸರ್ಕಾರದ ಅಂತಿಮ ಅನುಮೋದನೆ ಪಡೆಯಬೇಕೆಂದು ಷರತ್ತು ವಿಧಿಸಲಾಗಿದೆ.ಕಳೆದ ಕೆಲವು ಸಮಯದಿಂದ ಬೋಧಕರ ಕೊರತೆಯಿಂದ ತತ್ತರಿಸುತ್ತಿದ್ದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರದ ಈ ನಿರ್ಧಾರ ಹೊಸ ಚೈತನ್ಯ ನೀಡಲಿದ್ದು, ಸಾವಿರಾರು ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗ ಪಡೆಯುವ ಅವಕಾಶ ಒದಗಿ ಬಂದಿದೆ.
ವಿದ್ಯಾರ್ಹತೆ (Education Qualification):
• ಸಹಾಯಕ ಪ್ರಾಧ್ಯಾಪಕರು (Assistant Professors – ಪ್ರಥಮ ದರ್ಜೆ ಮತ್ತು ಎಂಜಿನಿಯರಿಂಗ್ ಕಾಲೇಜು):
o ಸಂಬಂಧಪಟ್ಟ ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ (Post Graduation) ಹೊಂದಿರಬೇಕು.
o ಜೊತೆಗೆ NET (National Eligibility Test) ಅಥವಾ SLET/KSET (State Eligibility Test) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
o ಒಂದು ವೇಳೆ ನೀವು ಪಿಎಚ್.ಡಿ (Ph.D) ಹೊಂದಿದ್ದರೆ, ಅವರಿಗೆ ಕೆಲವು ನಿಯಮಗಳ ಅಡಿಯಲ್ಲಿ NET/KSET ನಿಂದ ವಿನಾಯಿತಿ ಇರುತ್ತದೆ.
o ಎಂಜಿನಿಯರಿಂಗ್ ಕಾಲೇಜುಗಳಿಗೆ: ಸಂಬಂಧಪಟ್ಟ ವಿಷಯದಲ್ಲಿ BE/B.Tech ಮತ್ತು ME/M.Tech ಪದವಿ ಹೊಂದಿರಬೇಕು.
o
• ಪಾಲಿಟೆಕ್ನಿಕ್ ಉಪನ್ಯಾಸಕರು (Lecturers):
o ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ದರ್ಜೆಯಲ್ಲಿ ಪದವಿ (Bachelor’s Degree) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
o ನಾನ್-ಟೆಕ್ನಿಕಲ್ ವಿಷಯಗಳಿಗೆ (ಕನ್ನಡ, ಇಂಗ್ಲಿಷ್, ವಿಜ್ಞಾನ) ಸ್ನಾತಕೋತ್ತರ ಪದವಿ ಅಗತ್ಯವಿರುತ್ತದೆ.
ಆಯ್ಕೆ ಪ್ರಕ್ರಿಯೆ (Selection Process):
• ಸಾಮಾನ್ಯವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತದೆ.
• ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಗಮನಿಸಿ: ಅಧಿಕೃತ ನೋಟಿಫಿಕೇಶನ್ ಹೊರಬಂದಾಗ ವಯೋಮಿತಿ ಮತ್ತು ವಿದ್ಯಾರ್ಹತೆಯಲ್ಲಿ ಸಣ್ಣ ಬದಲಾವಣೆಗಳಿರಬಹುದು.

