HomeIndiaALERT : 'GOOGLE MAP' ನೋಡ್ಕೊಂಡು ಡ್ರೈವ್ ಮಾಡ್ತೀರಾ ಎಚ್ಚರ : ನದಿಗೆ ಬಿದ್ದು ಇಬ್ಬರು...

ALERT : ‘GOOGLE MAP’ ನೋಡ್ಕೊಂಡು ಡ್ರೈವ್ ಮಾಡ್ತೀರಾ ಎಚ್ಚರ : ನದಿಗೆ ಬಿದ್ದು ಇಬ್ಬರು ವೈದ್ಯರು ಸಾವು

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಪೆರಿಯಾರ್ ನದಿಗೆ ಕಾರು ಉರುಳಿದ ಪರಿಣಾಮ ಇಬ್ಬರು ವೈದ್ಯರು ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅದ್ವೈತ್ (29) ಮತ್ತು ಅಜ್ಮಲ್ (29) ಮುಂಜಾನೆ 12.30 ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರು ಕೊಡುಂಗಲ್ಲೂರಿಗೆ ಹಿಂದಿರುಗುತ್ತಿದ್ದ ವೇಳೆ ಗೂಗಲ್ ಮ್ಯಾಪ್ ಮೂಲಕ ದಾರಿ ನೋಡುತ್ತಿದ್ದರು. ನದಿಯನ್ನು ಜಲಾವೃತ ರಸ್ತೆ ಎಂದು ತಪ್ಪಾಗಿ ಭಾವಿಸಿ, ಅವರು ಮುಂದೆ ಸಾಗಿದ್ದಾರೆ. ಪರಿಣಾಮ ಕಾರು ಮುಳುಗಲು ಪ್ರಾರಂಭಿಸಿದ್ದು, ಅದ್ವೈತ್ ಮತ್ತು ಅಜ್ಮಲ್ ಇಬ್ಬರೂ ಹೊರಬರಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ. ಆದರೆ ಅದೃಷ್ಟವಶಾತ್ ಕಾರಿನಿಂದ ಹೊರಬಂದು ತಮ್ಮ ಪ್ರಾಣ ಕಾಪಾಡಿಕೊಂಡಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರು ದೌಡಾಯಿಸಿ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಕಾರಿನಲ್ಲಿದ್ದ ಮೂವರನ್ನು ಸ್ಥಳೀಯರು ಮತ್ತು ಅಗ್ನಿಶಾಮಕ ಸೇವಾ ಅಧಿಕಾರಿಗಳು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular