HomeKarnatakaBIG NEWS: ಟ್ರ್ಯಾಕ್ಟರ್ ಗೆ ಡಿಕ್ಕಿಯಾದ ಗೂಡ್ಸ್ ವಾಹನ; ಭೀಕರ ಅಪಘಾತದಲ್ಲಿ ರೈತ ಸಾವು

BIG NEWS: ಟ್ರ್ಯಾಕ್ಟರ್ ಗೆ ಡಿಕ್ಕಿಯಾದ ಗೂಡ್ಸ್ ವಾಹನ; ಭೀಕರ ಅಪಘಾತದಲ್ಲಿ ರೈತ ಸಾವು

ಬೆಳಗಾವಿ: ಟ್ರ್ಯಾಕ್ಟರ್ ಗೆ ಗೂಡ್ಸ್ ವಾಹನವೊಂದು ಹಿಂಬದಿಯಿಂದ ಡಿಕ್ಕಿಹೊಡೆದ ಪರಿಣಾಮ ಕೆಳಗೆ ಬಿದ್ದ ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುವರ್ಣಸೌಧದ ಬಳಿ ಈ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿ ಕೊತ್ತಂಬರಿ ಸೊಪ್ಪು ತುಂಬಿಕೊಂಡು ರೈತ ಬೆಳಗಾವಿ ಮಾರ್ಕೆಟ್ ಗೆ ಸಾಗುತ್ತಿದ್ದ. ಈ ವೇಳೆ ಹಿಂಬದಿಯಿಂದ ಬಂದ ಗೂಡ್ಸ್ ವಾಹನ ಏಕಾಏಕಿ ಟ್ರ್ಯಾಕ್ಟರ್ ಗೆ ಗುದ್ದಿದೆ. ಅಪಘಾತದ ಭೀಕರತೆಗೆ ರೈತ ಸ್ಥಳದಲ್ಲೇ ಸಾವನ್ನಪ್ಪಿದದರೆ.

ಬಸ್ತವಾಡಗಾಮದ ಮಲ್ಲಪ್ಪ ದೊಡ್ಡಕಲ್ಲನ್ನವರ್ (41) ಮೃತ ರೈತ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular