ಅಜೀಂ ಪ್ರೇಂ ಜೀ ಫೌಂಡೇಶನ್ನವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಒಂದು ವಿನೂತನ ಕಾರ್ಯಕ್ರಮ ಆರಂಭಿಸಿದ್ದು ಪದವಿ ಮೊದಲನೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿವೇತನವನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯನ್ನು ಸರ್ಕಾರಿ ಶಾಲೆಯಲ್ಲಿ ಓದಿ ಪ್ರಸ್ತುತ ಪದವಿಯನ್ನು ಖಾಸಗಿ ಅಥವಾ ಸರ್ಕಾರಿ ಯಾವುದಾದರೂ ಕಾಲೇಜಿನಲ್ಲಿ ಓದುತ್ತಿರುವಂತಹ ಪದವಿ ಮೊದಲನೇ ವರ್ಷದ ವಿದ್ಯಾರ್ಥಿನಿಯರಿಗೆ ರೂ.32,000 ವಿದ್ಯಾರ್ಥಿ ವೇತನವನ್ನು ನೀಡುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಜ.31 ಕಡೆಯ ದಿನವಾಗಿದ್ದು, ಅರ್ಜಿ ಸಲ್ಲಿಕೆ ವಿಧಾನ, ಇತರೆ ಹೆಚ್ಚಿನ ಮಾಹಿತಿಗಾಗಿ ಈ https://www.youtube.com/watch?v=dR0q9nozo-4, https://www.youtube.com/@azimpremjischolarship ಯೂಟ್ಯೂಬ್ ಲಿಂಕನ್ನು ಸಂಪರ್ಕಿಸಬಹುದೆಂದು ಜಿ.ಪಂ.ಸಿಇಓ ಎನ್ ಹೇಮಂತ್ ತಿಳಿಸಿದ್ದಾರೆ.
ನೇತ್ರ ಸಹಾಯಕರ ಹುದ್ದೆಯ ಆಯ್ಕೆ ಪಟ್ಟಿ ಪ್ರಕಟ; ಆಕ್ಷೇಪಣೆಗೆ ಆಹ್ವಾನ
ಶಿವಮೊಗ್ಗ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ನೇತ್ರ ಸಹಾಯಕರ 5 ಹುದ್ದೆಗೆ 2ನೇ ಹಂತದಲ್ಲಿ ಅಂತಿಮವಾಗಿ ಆಯ್ಕೆಯಾದವರ ಹಾಗೂ ಆಯ್ಕೆಯಾಗದವರ ಪಟ್ಟಿಯನ್ನು ಇಲಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಜ. 21 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಶಿವಮೊಗ್ಗ , ದೂ.ಸಂ.: 8197094440/ 9481691580/ 08182-222382 ಗಳನ್ನು ಸಂಪರ್ಕಿಸಬಹುದಾಗಿದೆ.

