HomeLatest Newsಆಧಾರ್ ನೋಂದಣಿ, ತಿದ್ದುಪಡಿ ಮಾಡಿಸುವವರಿಗೆ ಗುಡ್ ನ್ಯೂಸ್: ಅಂಚೆ ಕಚೇರಿಗಳಲ್ಲಿ ವ್ಯವಸ್ಥೆ

ಆಧಾರ್ ನೋಂದಣಿ, ತಿದ್ದುಪಡಿ ಮಾಡಿಸುವವರಿಗೆ ಗುಡ್ ನ್ಯೂಸ್: ಅಂಚೆ ಕಚೇರಿಗಳಲ್ಲಿ ವ್ಯವಸ್ಥೆ

ಭಾರತೀಯ ಅಂಚೆ ಇಲಾಖೆ ಹಾಸನ ವಿಭಾಗದ ಈ ಕೆಳಗಿನ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ನಿಗದಿತ ಕಚೇರಿ ವೇಳೆಯಲ್ಲಿ ಮಾಡಲಾಗುತ್ತದೆ.

ಹಾಸನ ಪ್ರಧಾನ ಅಂಚೆ ಕಚೇರಿ, ಅರಸೀಕೆರೆ ಪ್ರಧಾನ ಅಂಚೆ ಕಚೇರಿ, ಸಕಲೇಶಪುರ ಉಪ ಅಂಚೆ ಕಚೇರಿ, ವಿದ್ಯಾನಗರ ಉಪ ಅಂಚೆ ಕಚೇರಿ, ಕೆಆರ್ ಪುರಂ ಬಡಾವಣೆ ಉಪ ಅಂಚೆ ಕಚೇರಿ, ಹೊಳೆನರಸೀಪುರ ಉಪ ಅಂಚೆ ಕಚೇರಿ, ಅರಕಲಗೂಡು ಉಪ ಅಂಚೆ ಕಚೇರಿ, ಚನ್ನರಾಯಪಟ್ಟಣ ಉಪ ಅಂಚೆ ಕಚೇರಿ, ಹಳೇಬೀಡು ಉಪ ಅಂಚೆ ಕಚೇರಿ, ಜಾವಗಲ್ ಉಪ ಅಂಚೆ ಕಚೇರಿ, ದೊಡ್ಡಮೇಟಿಕುರ್ಕೆ ಉಪ ಅಂಚೆ ಕಚೇರಿ, ಹಿರಿಸಾವೆ ಉಪ ಅಂಚೆ ಕಚೇರಿ, ನುಗ್ಗೇಹಳ್ಳಿ ಉಪ ಅಂಚೆ ಕಚೇರಿ, ಬಾಗೂರು ಉಪ ಅಂಚೆ ಕಚೇರಿ, ಶ್ರವಣಬೆಳಗೊಳ ಉಪ ಅಂಚೆ ಕಚೇರಿ, ಯಸಳೂರ್ ಉಪ ಅಂಚೆ ಕಚೇರಿ, ಮೊಸಳೆ ಹೊಸಹಳ್ಳಿ ಉಪ ಅಂಚೆ ಕಚೇರಿ, ದೊಡ್ಡಮೇಟಿಕುರ್ಕೆ ಉಪ ಅಂಚೆ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಬೆ.9 ರಿಂದ ಸಂಜೆ.05 ಗಂಟೆಯವರೆಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿಯನ್ನು ಮಾಡಿಕೊಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಹಾಸನ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular