HomeLatest Newsರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್: ಕನ್ನಡಕ ಖರೀದಿಗೆ 3 ಸಾವಿರ, ಮಕ್ಕಳ ಶಿಕ್ಷಣಕ್ಕೆ 60 ಸಾವಿರ...

ರಾಜ್ಯದ ಪೊಲೀಸರಿಗೆ ಗುಡ್ ನ್ಯೂಸ್: ಕನ್ನಡಕ ಖರೀದಿಗೆ 3 ಸಾವಿರ, ಮಕ್ಕಳ ಶಿಕ್ಷಣಕ್ಕೆ 60 ಸಾವಿರ ರೂ.

ಬೆಂಗಳೂರು: ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ವೈದ್ಯಕೀಯ ತಪಾಸಣೆ ಭತ್ಯೆ ಹೆಚ್ಚಳ ಮಾಡಿದ ಬಳಿಕ ಕನ್ನಡಕ ಖರೀದಿಗೆ 3000 ರೂ. ಧನ ಸಹಾಯ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಸೇವಾವಧಿಯಲ್ಲಿ ಮೂರು ಬಾರಿ ಕನ್ನಡಕ ಖರೀದಿಸಲು ನೆರವು ನೀಡಲಾಗುವುದು. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಲಿಪಿಕ ಅಧಿಕಾರಿಗಳು, ಠಾಣೆಯಲ್ಲಿರುವ ಸಿಬ್ಬಂದಿ ಸೇವಾ ಅವಧಿಯಲ್ಲಿ ಮೂರು ಬಾರಿ ಕನ್ನಡಕ ಖರೀದಿಸಲು ಒಂದು ಬಾರಿಗೆ 3,000 ರೂ.ನಂತೆ ಸೇವಾ ಅವಧಿಯಲ್ಲಿ 9 ಸಾವಿರ ರೂಪಾಯಿ ನೀಡಲಾಗುವುದು.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮಕ್ಕಳಿಗೆ ಪೊಲೀಸ್ ಕಲ್ಯಾಣ ನಿಧಿಯಿಂದ ಮಂಜೂರಾಗುತ್ತಿರುವ ಸಹಾಯಧನ ಪರಿಷ್ಕರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ 10 ಸಾವಿರ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಎಲ್ಲಾ ಪದವಿ ಕೋರ್ಸುಗಳಿಗೆ 20,000 ರೂ., ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ 30,000 ರೂ. ಇಂಜಿನಿಯರಿಂಗ್ ಕೋರ್ಸ್ ಗಳಿಗೆ 40 ಸಾವಿರ ರೂ., ಇಂಜಿನಿಯರಿಂಗ್ ಸ್ನಾತಕೋತ್ತರ ಕೋರ್ಸ್ ಗಳಿಗೆ 50,000 ರೂ., ವೈದ್ಯಕೀಯ ವ್ಯಾಸಂಗಕ್ಕೆ 60,000 ರೂ. ನೀಡಲಾಗುವುದು ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular