ಬೆಂಗಳೂರು: ಪಡಿತರ ಚೀಟಿದಾರರಿಗೆ ಆಹಾರ ಸಚಿವರಿಂದ ಸಿಹಿ ಸುದ್ದಿ ಸಿಕ್ಕಿದೆ. ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಅಕ್ಕಿಯ ಜೊತೆಗೆ ತೊಗರಿ ಬೇಳೆ, ಉಪ್ಪು, ಅಡುಗೆ ಎಣ್ಣೆ, ಸಕ್ಕರೆ ಒಳಗೊಂಡ ಇಂದಿರಾ ಕಿಟ್ ವಿತರಿಸಲು ಟೆಂಡರ್ ಕರೆಯಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಮುಂದಿನ ತಿಂಗಳಿಂದ ಅನ್ನಭಾಗ್ಯ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು ಆರು ಸಾವಿರ ಕೋಟಿ ರೂ. ಟೆಂಡರ್ ಇದಾಗಿದೆ. ಬಹುತೇಕ ಈ ವಾರದಲ್ಲಿ ಅರ್ಹ ಬಿಡ್ ದಾರರಿಗೆ ಟೆಂಡರ್ ನೀಡಲಾಗುವುದು. ಮುಂದಿನ ತಿಂಗಳಿನಿಂದ ಅನ್ನಭಾಗ್ಯ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಇಂದಿರಾ ಕಿಟ್ ನಲ್ಲಿ ಅಡುಗೆ, ಎಣ್ಣೆ, ಉಪ್ಪು, ಸಕ್ಕರೆ, ತೊಗರಿ ಬೇಳೆ ಮೊದಲಾದ ವಸ್ತುಗಳು ಇರಲಿವೆ. ಅನ್ನಭಾಗ್ಯ ಅಕ್ಕಿ ಜೊತೆಗೆ ಇಂದಿರಾ ಕಿಟ್ ವಿತರಿಸಲಾಗುವುದು ಎನ್ನಲಾಗಿದೆ.
ಇಂದಿರಾ ಕಿಟ್ ಬಗ್ಗೆ
ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಯ ಬದಲಾಗಿ, ಬಿಪಿಎಲ್ (BPL) ಪಡಿತರ ಚೀಟಿದಾರರಿಗೆ ಪೌಷ್ಟಿಕಾಂಶಯುಕ್ತ ಪದಾರ್ಥಗಳನ್ನೊಳಗೊಂಡ ‘ಇಂದಿರಾ ಕಿಟ್’ (Indira Food Kit) ಅನ್ನು ವಿತರಿಸಲು ನಿರ್ಧರಿಸಿದೆ.
ಈ ಕಿಟ್ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಒಳಗೊಂಡಿದ್ದು, ಪಡಿತರ ಅಂಗಡಿಗಳ ಮೂಲಕ ವಿತರಿಸಲಾಗುತ್ತದೆ.
ಯಾರಿಗೆ ಲಭ್ಯ: ರಾಜ್ಯದ 1.26 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ
ಕಿಟ್ನಲ್ಲಿ ಏನಿದೆ?: ತೊಗರಿಬೇಳೆ, ಸೂರ್ಯಕಾಂತಿ ಅಡುಗೆ ಎಣ್ಣೆ, ಸಕ್ಕರೆ, ಉಪ್ಪು.
ವಿತರಣೆಯ ಪ್ರಮಾಣ (ಕುಟುಂಬದ ಸದಸ್ಯರ ಆಧಾರದ ಮೇಲೆ):
1-2 ಸದಸ್ಯರು: ಅರ್ಧ ಕೆಜಿ ಕಿಟ್.
3-4 ಸದಸ್ಯರು: 1 ಕೆಜಿ ಕಿಟ್.
5+ ಸದಸ್ಯರು: 1.5 ಕೆಜಿ ಕಿಟ್.
ಉದ್ದೇಶ: ಬಡ ಕುಟುಂಬಗಳಿಗೆ ಕೇವಲ ಅಕ್ಕಿಯಲ್ಲದೆ, ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒದಗಿಸುವುದು ಮತ್ತು ಅಕ್ಕಿ ಸಾಗಾಣಿಕೆಯ ದುರುಪಯೋಗ ತಡೆಯುವುದು. 2026-27ನೇ ಸಾಲಿನ ಬಜೆಟ್ನಲ್ಲಿ ಈ ಯೋಜನೆಗಾಗಿ 6,200 ಕೋಟಿ ರೂ. ಮೀಸಲಿಡಲಾಗಿದೆ.

