HomeLatest Newsರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್..! ತತ್ಕಾಲ್ ಟಿಕೆಟ್‌’ಗೆ ಹೊಸ ರೂಲ್ಸ್, ಇನ್ಮುಂದೆ ಸಾಲಿನಲ್ಲಿ ನಿಲ್ಲುವ ಟೆನ್ಷನ್...

ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್..! ತತ್ಕಾಲ್ ಟಿಕೆಟ್‌’ಗೆ ಹೊಸ ರೂಲ್ಸ್, ಇನ್ಮುಂದೆ ಸಾಲಿನಲ್ಲಿ ನಿಲ್ಲುವ ಟೆನ್ಷನ್ ಇಲ್ಲ.!

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ವೆಸ್ಟ್ ಸೆಂಟ್ರಲ್ ರೈಲ್ವೆ ಸಿಹಿಸುದ್ದಿ ನೀಡಿದೆ. ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಕೌಂಟರ್‌ಗಳಲ್ಲಿ ಉಂಟಾಗುವ ದಟ್ಟಣೆ ಹಾಗೂ ಏಜೆಂಟ್‌ಗಳ ಹಾವಳಿಯನ್ನು ತಡೆಗಟ್ಟಲು ಆಗಸ್ಟ್ 1ರಿಂದ ಹೊಸ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಹೊಸ ವ್ಯವಸ್ಥೆಯಲ್ಲಿ ಬುಕ್ಕಿಂಗ್ ಆರಂಭಕ್ಕೂ ಮುನ್ನವೇ ಪ್ರಯಾಣಿಕರಿಗೆ ಟೋಕನ್ ವಿತರಿಸಲಾಗುತ್ತದೆ.

ಏನಿದು ಹೊಸ ಟೋಕನ್ ವ್ಯವಸ್ಥೆ?

ಹೊಸ ನಿಯಮದ ಪ್ರಕಾರ ಪ್ರಯಾಣಿಕರು ಕೌಂಟರ್ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಬುಕ್ಕಿಂಗ್ ಆರಂಭಕ್ಕೂ ಮುನ್ನ ಟೋಕನ್ ಪಡೆದು ತಮ್ಮ ಸರದಿಯಂತೆ ಟಿಕೆಟ್ ಬುಕ್ ಮಾಡಿಸಿಕೊಳ್ಳಬಹುದು.

  • ಬೆಳಗ್ಗೆ 8:30 ರಿಂದ 9:00ರವರೆಗೆ – AC ತತ್ಕಾಲ್ ಟಿಕೆಟ್‌ಗಳಿಗೆ ಟೋಕನ್ ವಿತರಣೆ
  • ಬೆಳಗ್ಗೆ 9:00 ರಿಂದ 9:30ರವರೆಗೆ – Non-AC ಮತ್ತು ಸ್ಲೀಪರ್ ತತ್ಕಾಲ್ ಟಿಕೆಟ್‌ಗಳಿಗೆ ಟೋಕನ್ ವಿತರಣೆ

ಟೋಕನ್‌ಗಳಿಗೆ ಮಿತಿ

ಕೌಂಟರ್‌ಗಳಲ್ಲಿ ಗೊಂದಲ ಮತ್ತು ನೂಕುನುಗ್ಗಲು ತಪ್ಪಿಸಲು ಪ್ರತಿ ಮೀಸಲಾತಿ ಕೌಂಟರ್‌ಗೆ ಟೋಕನ್‌ಗಳ ಸಂಖ್ಯೆಗೆ ಮಿತಿ ವಿಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಒಂದು ಕೌಂಟರ್‌ಗೆ ಗರಿಷ್ಠ 10 AC ತತ್ಕಾಲ್ ಟೋಕನ್‌ಗಳು
  • 15 Non-AC/ಸ್ಲೀಪರ್ ತತ್ಕಾಲ್ ಟೋಕನ್‌ಗಳು ಮಾತ್ರ

ಹೊಸ ನಿಯಮದ ಪ್ರಕಾರ ಸ್ವಂತ ಪ್ರಯಾಣ ಅಥವಾ ಕುಟುಂಬ ಸದಸ್ಯರ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಏಜೆಂಟ್‌ಗಳ ದುರುಪಯೋಗಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಆಗುವ ಲಾಭವೇನು?

ಇದುವರೆಗೆ ಟೋಕನ್ ಪಡೆಯಲು ಒಮ್ಮೆ, ಟಿಕೆಟ್ ಬುಕ್ಕಿಂಗ್‌ಗೆ ಮತ್ತೊಮ್ಮೆ ಸರತಿಯಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಒಂದೇ ಬಾರಿ ಟೋಕನ್ ಪಡೆದು ಟಿಕೆಟ್ ಬುಕ್ ಮಾಡಿಸಿಕೊಳ್ಳಬಹುದು. ಇದರಿಂದ ಸಮಯ ಉಳಿತಾಯವಾಗುವುದರ ಜೊತೆಗೆ ಕೌಂಟರ್‌ಗಳಲ್ಲಿನ ಗೊಂದಲವೂ ಕಡಿಮೆಯಾಗಲಿದೆ.

ತತ್ಕಾಲ್ ಟಿಕೆಟ್ ಬುಕ್ಕಿಂಗ್ ವೇಳೆ ಕಡ್ಡಾಯವಾಗಿ ತರಬೇಕಾದ ದಾಖಲೆಗಳು

  • ಗುರುತಿನ ಚೀಟಿ: ಆಧಾರ್ ಕಾರ್ಡ್ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಫೋಟೋ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು.
  • ಪ್ರಯಾಣದ ವಿವರಗಳು: ಪ್ರಯಾಣಿಕರ ಹೆಸರು, ವಯಸ್ಸು, ರೈಲು ಸಂಖ್ಯೆ ಹಾಗೂ ಇತರೆ ವಿವರಗಳನ್ನು ಮುಂಚಿತವಾಗಿ ಬರೆದುಕೊಂಡು ಹೋದರೆ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುತ್ತದೆ.

ಈ ಹೊಸ ಟೋಕನ್ ವ್ಯವಸ್ಥೆಯಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಇನ್ನಷ್ಟು ಸುಲಭ, ವೇಗ ಮತ್ತು ಪಾರದರ್ಶಕವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular