HomeKarnatakaಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ಶುಲ್ಕ ಶೇ. 5ರಿಂದ 2ಕ್ಕೆ ಇಳಿಕೆ: ನಾಳೆಯೂ ಅಭಿಯಾನ

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ-ಖಾತಾ ಶುಲ್ಕ ಶೇ. 5ರಿಂದ 2ಕ್ಕೆ ಇಳಿಕೆ: ನಾಳೆಯೂ ಅಭಿಯಾನ

ಬೆಂಗಳೂರು: ಬೆಂಗಳೂರು ನಗರದಲ್ಲಿ ಆರಂಭಿಸಿರುವ ಇ- ಖಾತಾ ಅಭಿಯಾನಕ್ಕೆ ನಾಗರೀಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೇ 23ರ ಶನಿವಾರವೂ ಇ- ಖಾತಾ ಅಭಿಯಾನ ನಡೆಯಲಿದೆ.

5 ನಗರ ಪಾಲಿಕೆಗಳ 52 ಸ್ಥಳಗಳಲ್ಲಿ ಇ-ಖಾತಾ ಅಭಿಯಾನ ಆರಂಭವಾಗಿದೆ. ಇ-ಖಾತಾ, ಮ್ಯುಟೇಷನ್, ಹೊಸ ಇ-ಖಾತಾ, ಬಿ ಟು ಎ ಖಾತಾ ಮತ್ತು ದೂರು ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಪರಿಶೀಲಿಸಿ ಅನುಮೋದನೆ ನೀಡಿ ಅಂತಿಮ ಇ-ಖಾತಾಗಳನ್ನು ವಿತರಿಸಲಾಗುವುದು.

ಜಿಬಿಎ ವ್ಯಾಪ್ತಿಯ ಆಸ್ತಿಗಳಿಗೆ ಮೇ 15 ರಿಂದ ಆ. 28 ರವರೆಗೆ ಅಭಿಯಾನ ನಡೆಯಲಿದೆ. ಪಾವತಿಸಬೇಕಾದ ಶುಲ್ಕವನ್ನು ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇಕಡ 5ರಿಂದ ಶೇಕಡ 2ಕ್ಕೆ ಇಳಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಅವಕಾಶವನ್ನು ಸುಮಾರು 7 ಲಕ್ಷ ಆಸ್ತಿ ಮಾಲೀಕರು ಬಳಸಿಕೊಂಡು ತಮ್ಮ ಆಸ್ತಿಯ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ಕೋರಲಾಗಿದೆ. ಅಭಿಯಾನ ನಡೆಯುವ ಸ್ಥಳಗಳಿಗಾಗಿ http://tinyurl.com/ymv5tSey ಲಿಂಕ್ ಡೌನ್ಲೋಡ್ ಮಾಡಿ ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ.

ಚಿತ್ರಕೃಪೆ:ಎಐ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular