HomeLatest Newsಗುಡ್ ನ್ಯೂಸ್: ಬಿ ಖಾತಾ ನಿವೇಶನ ಮಾಲೀಕರಿಗೆ ಭೂಮಿ ಸ್ವಯಂ ಪರಿವರ್ತನೆ ತಂತ್ರಾಂಶ ಬಿಡುಗಡೆ

ಗುಡ್ ನ್ಯೂಸ್: ಬಿ ಖಾತಾ ನಿವೇಶನ ಮಾಲೀಕರಿಗೆ ಭೂಮಿ ಸ್ವಯಂ ಪರಿವರ್ತನೆ ತಂತ್ರಾಂಶ ಬಿಡುಗಡೆ

ಬೆಂಗಳೂರು: ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಪ್ರತ್ಯೇಕ ಭೂ ಪರಿವರ್ತನೆ ಅಗತ್ಯವಿಲ್ಲ. ಬಿ ಖಾತಾ ನಿವೇಶನ ಮಾಲೀಕರಿಗೆ ಭೂಮಿ ಸ್ವಯಂ ಪರಿವರ್ತನೆ ತಂತ್ರಾಂಶ ಬಿಡುಗಡೆ ಮಾಡಲಾಗಿದೆ.

ಶನಿವಾರ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಬಿಎ ವ್ಯಾಪ್ತಿಯ ಭೂಮಿ ಸ್ವಯಂ ಪರಿವರ್ತನೆ ನೂತನ ತಂತ್ರಾಂಶ ಬಿಡುಗಡೆಗೊಳಿಸಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಮಾಹಿತಿ ನೀಡಿದ್ದಾರೆ.

ಮಾಸ್ಟರ್ ಪ್ಲಾನ್ ಪ್ರದೇಶದಲ್ಲಿ ಭೂಮಿಯನ್ನು ಸ್ವಯಂ ಪರಿವರ್ತನೆ ಮಾಡುವ ಅಗತ್ಯವಿಲ್ಲ. ನೇರವಾಗಿ ಯೋಜನೆಗೆ ಅನುಮೋದನೆ ಪಡೆದುಕೊಳ್ಳಬಹುದಾಗಿದೆ. ಯೋಜನಾ ಅನುಮೋದನೆಯ ಭಾಗವಾಗಿ ಪರಿವರ್ತನೆ ಮಾಡಲಾಗುವುದು. ಅಲ್ಲದೆ, ಮಾಸ್ಟರ್ ಪ್ಲಾನ್ ಪ್ರಕಾರ ಲಕ್ಷಾಂತರ ಜಿಬಿಎ ಬಿ ಖಾತಾ ನಿವೇಶನ ಮಾಲೀಕರಿಗೆ ಪ್ರಯೋಜನವಾಗುವಂತೆ ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಸಕ್ರಿಯಗೊಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದುವರೆಗೆ ಮಾಸ್ಟರ್ ಪ್ಲಾನ್ ಒಳಗೆ ಬರುವ ಪ್ರದೇಶಗಳಲ್ಲಿಯೂ ಭೂಮಿಯನ್ನು ಪರಿವರ್ತಿಸಬೇಕಿತ್ತು, ಡೀಮ್ಡ್ ಕನ್ವರ್ಷನ್ ಹೊರತಾಗಿಯೂ ಈ ಪ್ರಕ್ರಿಯೆಗೆ ಕನಿಷ್ಠ ನಾಲ್ಕರಿಂದ ಆರು ತಿಂಗಳು ಆಗುತ್ತಿತ್ತು. ಮಧ್ಯವರ್ತಿಗಳು ಡೆವಲಪರ್ ಗಳನ್ನು ಶೋಷಿಸಲು ಅವಕಾಶವಿತ್ತು. ಕಿರುಕುಳ, ವಿಳಂಬ, ಭ್ರಷ್ಟಾಚಾರ, ವೆಚ್ಚ ಹೆಚ್ಚಳ ನಿವೇಶನ ಖರೀದಿದಾರರಿಗೆ ಹೊರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ವಯಂ ಪರಿವರ್ತನೆಯನ್ನು ಜಾರಿಗೆ ತರಲಾಗಿದೆ. ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ನಿವೇಶನ ಖರೀದಿಸಲು ಇದರಿಂದ ಅನುಕೂಲವಾಗುತ್ತದೆ. ಭೂ ಅಭಿವೃದ್ಧಿಯ ವೆಚ್ಚ, ಸಮಯ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular