HomeKarnatakaರಾಜ್ಯದ ವಿದ್ಯುತ್ ಗ್ರಾಹಕರಿಗೆ ʻಸಂತಸದ ಸುದ್ದಿʼ : ಪ್ರತಿ ಯೂನಿಟ್ ಗೆ 3 ಪೈಸೆಯಿಂದ 51...

ರಾಜ್ಯದ ವಿದ್ಯುತ್ ಗ್ರಾಹಕರಿಗೆ ʻಸಂತಸದ ಸುದ್ದಿʼ : ಪ್ರತಿ ಯೂನಿಟ್ ಗೆ 3 ಪೈಸೆಯಿಂದ 51 ಪೈಸೆವರೆಗೆ ಕಡಿತ

ಬೆಂಗಳೂರು : ರಾಜ್ಯ ಸರ್ಕಾರವು ವಿದ್ಯುತ್‌ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದು, ಪ್ರತಿ ಯುನಿಟ್‌ಗೆ 3 ಪೈಸೆಯಿಂದ 51 ಪೈಸೆವರೆಗೂ ಕಡಿತ ಮಾಡಲು ನಿರ್ಧರಿಸಿದೆ.

ನವೆಂಬರ್‌ ತಿಂಗಳಲ್ಲಿ ಇಂಧನ ಮತ್ತು ವಿದ್ಯುತ್‌ ಖರೀದಿ ಹೊಂದಾಣಿಕೆ ವೆಚ್ಚ ಇಳಿಕೆಯ ಫಲವಾಗಿ ಜನವರಿ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಪ್ರತಿ ಯುನಿಟ್‌ಗೆ 3 ಪೈಸೆಯಿಂದ 51 ಪೈಸೆವರೆಗೂ ಕಡಿತ ಮಾಡಲು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಎಲ್ಲಾ ಎಸ್ಕಾಂಗಳಿಗೆ ಸೂಚನೆ ನೀಡಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿ 31 ಪೈಸೆ , ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 37 ಪೈಸೆ, , ಹೆಸ್ಕಾಂ ವ್ಯಾಪ್ತಿಯಲ್ಲಿ 3 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 51 ಪೈಸೆ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 39 ಪೈಸೆ ಕಡಿಮೆಯಾಗಲಿದೆ. ಜನವರಿ ತಿಂಗಳ ವಿದ್ಯುತ್ ಬಿಲ್ನಲ್ಲಿ ಸರಿದೂಗಿಸುವಂತೆ ಎಲ್ಲಾ ಎಸ್ಕಾಂಗಳಿಗೆ ಕೆಇಆರ್ಸಿ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular