HomeLatest Newsಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲಿನ ಸಾಮಾನ್ಯ ಸ್ಲೀಪರ್ ಕೋಚ್ ನಲ್ಲೂ ಹೊದಿಕೆ, ದಿಂಬು ವಿತರಣೆ

ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲಿನ ಸಾಮಾನ್ಯ ಸ್ಲೀಪರ್ ಕೋಚ್ ನಲ್ಲೂ ಹೊದಿಕೆ, ದಿಂಬು ವಿತರಣೆ

ನವದೆಹಲಿ: ಇದುವರೆಗೆ ಎಸಿ ಕೋಚ್ ಪ್ರಯಾಣಿಕರಿಗೆ ಮಾತ್ರ ರೈಲ್ವೆ ಇಲಾಖೆ ಹಾಸಿಗೆ, ದಿಂಬು, ಹೊದಿಕೆ ನೀಡುತ್ತಿದ್ದು, ಇದೀಗ ನಾನ್ ಎಸಿ ಸ್ಲೀಪರ್ ಕೋಚ್ ಪ್ರಯಾಣಿಕರಿಗೂ ಈ ಸೌಲಭ್ಯ ಕಲ್ಪಿಸಲಿದ್ದು, ಜನವರಿ 1ರಿಂದ ಜಾರಿಗೆ ಬರಲಿದೆ.

ಜನವರಿ 1ರಿಂದ ನಾನ್ ಎಸಿ ಸ್ಲೀಪರ್ ಕೋಚ್ ಪ್ರಯಾಣಿಕರಿಗೆ ನಿಗದಿತ 50 ಬಾಡಿಗೆ ಆಧಾರದಲ್ಲಿ ತಲೆದಿಂಬು ಮತ್ತು ಬೆಡ್ ಶೀಟ್ ವಿತರಿಸಲು ದಕ್ಷಿಣ ರೈಲ್ವೆ ನಿರ್ಧರಿಸಿದೆ.

ಚೆನ್ನೈ -ಮಂಗಳೂರು ಸೂಪರ್ ಫಾಸ್ಟ್ ಎಕ್ಸ್ಪ್ರೆಸ್, ಚೆನ್ನೈ ಎಗ್ಮೋರ್ -ಮಂಗಳೂರು ಎಕ್ಸ್ ಪ್ರೆಸ್ ಸೇರಿ 10 ರೈಲುಗಳಲ್ಲಿ ಹೊದಿಕೆ, ತಲೆದಿಂಬು ವಿತರಿಸುವ ಯೋಜನೆ ಆರಂಭಿಕ ಹಂತದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದ್ದು, ಇದರ ಯಶಸ್ಸು ನೋಡಿಕೊಂಡು ಉಳಿದ ರೈಲುಗಳಲ್ಲೂ ಸೇವೆ ವಿಸ್ತರಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಳೆಗಾಲ ಮತ್ತು ಚಳಿಗಾಲದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ. ಕವರ್ ಸಹಿತ ತಲೆದಿಂಬು ಮತ್ತು ಬೆಡ್ ಶೀಟ್ ಗೆ 50 ರೂ. ಬಾಡಿಗೆ, ಕೇವಲ ಬೆಡ್ ಶೀಟ್ ಗೆ 20 ರೂ., ಕವರ್ ಸಹಿತ ತಲೆದಿಂಬು ಬೇಕಿದ್ದರೆ 30 ರೂ. ನೀಡಬೇಕಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular