
ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್ಸ್, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಂದ ಸಿಇಟಿ, ನೀಟ್ ಮುಖಾಂತರ M.B.B.S/ B.D.S/ B Ayush/Bachelor of Architecture/ B.E / Bachelor of Technology Courses Pharmacy, Agriculture Science, Veternary, and Farm Science Courses ಗಳಿಗೆ ಪ್ರವೇಶ ಹೊಂದುವ ವಿದ್ಯಾರ್ಥಿಗಳಿಗೆ ನಿಗಮದಿಂದ ಒದಗಿಸುವ ಅರಿವು ಯೋಜನೆಯಡಿ ಸಾಲ ಸೌಲಭ್ಯ ನೀಡಲಾಗುವುದು.
ಅರ್ಜಿ ಸಲ್ಲಿಸುವವರು ನಿಗಮದ ವೆಬ್ಸೈಟ್ https://kmdconline.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಭರ್ತಿ ಮಾಡಿ ಅದರ ಪ್ರಿಂಟ್ಕಾಪಿಯನ್ನು ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು.
ಬೇಕಾದ ದಾಖಲೆಗಳು: ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಆಧಾರ್ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ಕಾರ್ಡ್, ಅಭ್ಯರ್ಥಿ ಮತ್ತು ತಂದೆ, ತಾಯಿಯ 5 ಭಾವಚಿತ್ರಗಳು, CET/ NEET All Copies & Hall Ticket, Indemnity bond with Notary ಈ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ಕಂಟೋನ್ಮೆಂಟ್ನ ವಿಜಯನಗರ ಕಾಲೋನಿಯ ಹಳೇಮಾರುಕಟ್ಟೆ ರಸ್ತೆ, ನಳಂದ ಕಾಲೇಜ್ ಪಕ್ಕದಲ್ಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, (ನಿ), ಮ ನಂ.47/25 ಅಥವಾ ದೂ.08392-294370 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

