ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹಳದಿ ಮಾರ್ಗದ ಮೆಟ್ರೋ ಎಂಟನೇ ರೈಲು ನಾಳೆ ಬೆಂಗಳೂರಿಗೆ ತಲುಪಲಿದೆ.
ಜನವರಿ 19ರಂದು ಬೆಂಗಳೂರಿಗೆ ಹಳದಿ ಮಾರ್ಗದ ಎಂಟನೇ ರೈಲು ತಲುಪಲಿದ್ದು, ಮುಂದಿನ ದಿನಗಳಲ್ಲಿ ರೈಲಿಗಾಗಿ ಮೆಟ್ರೋ ಪ್ರಯಾಣಿಕರು ಕಾಯುವ ಸಮಯ ಮತ್ತಷ್ಟು ಕಡಿಮೆಯಾಗಲಿದೆ. ಎಂಟನೇ ರೈಲು ಆಗಮನ ಬಳಿಕ ರೈಲಿನ ಟೆಸ್ಟಿಂಗ್, ತಾಂತ್ರಿಕ ಪರೀಕ್ಷೆ ನಡೆಸಿ ವಾಣಿಜ್ಯ ಕಾರ್ಯಾಚರಣೆಗೆ ಇಳಿಸಲಾಗುವುದು.
ಅದರು ಸಂಚಾರ ಆರಂಭ ಮಾಡಿದ ನಂತರ ರೈಲುಗಳ ಓಡಾಟದ ಸಮಯ ಮತ್ತಷ್ಟು ಕಡಿಮೆಯಾಗಿದೆ. ಸದ್ಯ 10 ನಿಮಿಷಗಳಿಗೆ ಒಂದು ರೈಲು ಸಂಚರಿಸುತ್ತಿದ್ದು, ಜನರ ಸಂಚಾರ ದಟ್ಟಣೆ ಸಮಯದಲ್ಲಿ ಮತ್ತಷ್ಟು ಸಮಯ ಇಳಿಕೆಯಾಗಲಿದೆ.

