ಬೆಂಗಳೂರು: ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಅನುಕೂಲವಾಗುವಂತೆ ಒಟಿಎಸ್ ಯೋಜನೆ ಪ್ರಕ್ರಿಯೆಯನ್ನು ಬೆಂಗಳೂರು ಜಲಮಂಡಳಿ ಅಧಿಕೃತವಾಗಿ ಆರಂಭಿಸಿದೆ.
ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದು, ನೀರಿನ ಬಿಲ್ ಬಾಕಿ ಪಾವತಿಸಲು ಒಟಿಎಸ್ ಯೋಜನೆ ಪ್ರಕ್ರಿಯೆಯನ್ನು ಜಲ ಮಂಡಳಿ ಅಧಿಕೃತವಾಗಿ ಆರಂಭಿಸಿದೆ. ಈ ಬಾರಿ ನೀರಿನ ಬಿಲ್ ಜೊತೆಯಲ್ಲಿಯೇ ಯೋಜನೆಯಡಿಯಲ್ಲಿ ಬರುವ ಗ್ರಾಹಕರಿಗೆ ಪಾವತಿ ಒಳಗೊಂಡ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
5.11 ಲಕ್ಷ ಗ್ರಾಹಕರು ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದವರೆಗಿನ ಮಾಹಿತಿಯಂತೆ ನೀರಿನ ಬಿಲ್ ಬಾಕಿ ಅಸಲು ಮೊತ್ತ 539.43 ಕೋಟಿ ರೂ., ಬಡ್ಡಿ 311.90 ಕೋಟಿ ರೂ. ಇದೆ. ಈ ಬಾಕಿಯನ್ನು ಸುಲಭವಾಗಿ ಪಾವತಿಸಲು, ಗ್ರಾಹಕರ ಮೇಲಿನ ಆರ್ಥಿಕ ಹೊರೆತಗ್ಗಿಸಲು ಏಪ್ರಿಲ್ ನಿಂದ ಜೂನ್ ವರೆಗೆ ಮೂರು ತಿಂಗಳ ಅವಧಿಗೆ ಈ ಒಟಿಎಸ್ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.

