ತುಮಕೂರು: ತುಮಕೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಇಂಟಿಗ್ರೇಟೆಡ್ ಪರ್ಸನಲ್ ಸರ್ವಿಸ್ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜೂನ್ 9ರಂದು ಉದ್ಯೋಗಕ್ಕಾಗಿ ನೇರ ಸಂದರ್ಶನ ನಡೆಸಲಾಗುವುದು.
ಖಾಲಿ ಇರುವ ಡಾಟಾ ಎಂಟ್ರಿ ಆಪರೇಟರ್, ಟೆಲಿಕಾಲರ್ಸ್, ಡೆಲಿವರಿ ಬಾಯ್ಸ್, ಫೀಲ್ಡ್ ಟೆಕ್ನಿಷಿಯನ್, ಫೀಲ್ಡ್ ಎಕ್ಸಿಕ್ಯೂಟಿವ್, ಫೀಲ್ಡ್ ಸೇಲ್ಸ್ ಎಕ್ಸಿಕ್ಯೂಟಿವ್, ಡಿಸೈನ್ ಕನ್ಸಲ್ಟೆಂಟ್ ಹುದ್ದೆಗಳಿಗೆ ನೇರ ಸಂದರ್ಶನ ನಡೆಯಲಿದೆ.
ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವೇ ಪಾಸಾದ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 22,000 ರೂ.ನಿಂದ 37,500 ರೂ.ವರೆಗೆ ವೇತನ ನೀಡಲಾಗುವುದು.
ಅರ್ಹ ಅಭ್ಯರ್ಥಿಗಳು ಜೂನ್ 9ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಡಿಡಿಪಿಐ ಬಸ್ ನಿಲ್ದಾಣ, ವಾಸನ್ ಕಣ್ಣಿನ ಆಸ್ಪತ್ರೆ ಹತ್ತಿರ, ಮೂಲೆಮನೆ ಹೋಟೆಲ್ ಪಕ್ಕ, ಸೋಮೇಶ್ವರ ಪುರಂ, 14ನೇ ಕ್ರಾಸ್, ತುಮಕೂರು ಇಲ್ಲಿ ತಮ್ಮ ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816 2278488 ಸಂಪರ್ಕಿಸಬಹುದಾಗಿದೆ.

