HomeLive Newsರೈತರಿಗೆ ಗುಡ್ ನ್ಯೂಸ್: ಚಿನ್ನಕ್ಕೇ ಪೈಪೋಟಿ ನೀಡುವಂತೆ ಭಾರಿ ಏರಿಕೆ ಕಂಡ ಅಡಕೆ ದರ, ಕ್ವಿಂಟಾಲ್...

ರೈತರಿಗೆ ಗುಡ್ ನ್ಯೂಸ್: ಚಿನ್ನಕ್ಕೇ ಪೈಪೋಟಿ ನೀಡುವಂತೆ ಭಾರಿ ಏರಿಕೆ ಕಂಡ ಅಡಕೆ ದರ, ಕ್ವಿಂಟಾಲ್ ಗೆ 96 ಸಾವಿರ

ಚಿನ್ನಕ್ಕೇ ಪೈಪೋಟಿ ನೀಡುವಂತೆ ಅಡಕೆ ದರ ಕೂಡ ಏರಿಕೆಯಾಗತೊಡಗಿದೆ. ಮಾರುಕಟ್ಟೆಯಲ್ಲಿ ಚಿನ್ನದ ಮಾದರಿಯಲ್ಲಿ ಅಡಕೆ ದರ ನಿರಂತರವಾಗಿ ಏರುಗತಿಯಲ್ಲಿ ಸಾಗಿದೆ.

ಅತಿದೊಡ್ಡ ಅಡಕೆ ಮಾರುಕಟ್ಟೆ ಎಂದೇ ಹೇಳಲಾಗುವ ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ಅಡಿಕೆ ದರ ಕ್ವಿಂಟಾಲ್ ಗೆ ಒಂದು ಲಕ್ಷ ರೂ. ತಲುಪುವ ಆಶಾಭಾವನೆ ಮೂಡಿಸಿದೆ. ಏಪ್ರಿಲ್ 24ರಂದು ಸರಕು ಅಡಕೆ ಕ್ವಿಂಟಾಲ್ ಗೆ 96,340 ರೂ. ದರ ಸಿಕ್ಕಿದೆ.

ಅದೇ ರೀತಿ ಅತಿ ಹೆಚ್ಚು ಆವಕವಾಗುವ ಬೆಟ್ಟೆ, ರಾಶಿ, ಇಡಿ ಧಾರಣೆ ಕೂಡ 60 ಸಾವಿರ ರೂ.  ಆಸುಪಾಸಿನಲ್ಲಿದೆ. ಚಾಲಿ ಅಡಕೆ ದರ 40 ರಿಂದ 45 ಸಾವಿರ ರೂ. ನಡುವೆ ಇದೆ. ದಶಕದ ಹಿಂದೆ ಸರಕು ಅಡಿಕೆ ದರ ಕ್ವಿಂಟಾಲ್ ಗೆ 95,000 ರೂ., ರಾಶಿ ಇಡಿ ಅಡಿಕೆ ದರ 80,000 ರೂ. ಗಡಿ ದಾಟಿತ್ತು. ಇದೀಗ ಸರಕು ಅಡಿಕೆಗೆ ಕ್ವಿಂಟಾಲ್ ಗೆ 96 ಸಾವಿರ ರೂ. ದರ ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏಪ್ರಿಲ್ 24ರಂದು ಶಿವಮೊಗ್ಗ ಎಪಿಎಂಸಿಯಲ್ಲಿ ಸರಕು ದರ ಕ್ವಿಂಟಾಲ್ ಗೆ ಕನಿಷ್ಠ 67,240 ರೂ., ಗರಿಷ್ಠ 96,340 ರೂ ಧಾರಣೆ ಸಿಕ್ಕಿದೆ.

ಬೆಟ್ಟೆ 53,669 -63,389 ರೂ., ರಾಶಿ 55,169 -60,699 ರೂ., ಇಡಿ 45,699-59,809 ರೂ., ಚಾಲಿ 38,899-44,098 ರೂ. ಧಾರಣೆ ಸಿಕ್ಕಿದೆ.

ಆದರೆ ಮಾರುಕಟ್ಟೆಯಲ್ಲಿ ಅಡಕೆಗೆ ಬಂಪರ್ ಬೆಲೆ ಬಂದಿದ್ದರೂ, ಬಹುತೇಕ ರೈತರ ಬಳಿ ಅಡಕೆ ದಾಸ್ತಾನು ಇಲ್ಲವಾಗಿದೆ. ಈ ವೇಳೆಗಾಗಲೇ ಹೆಚ್ಚಿನ ರೈತರು ಅಡಕೆ ಮಾರಾಟ ಮಾಡಿರುತ್ತಾರೆ. ದೊಡ್ಡ ರೈತರು, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular