HomeLatest NewsBIG NEWS: ಸಾಮಾಜಿಕ ಕಾರ್ಯಕರ್ತನನ್ನು ಗುಂಡಿಟ್ಟು ಕೊಂದ ಉಗ್ರರು

BIG NEWS: ಸಾಮಾಜಿಕ ಕಾರ್ಯಕರ್ತನನ್ನು ಗುಂಡಿಟ್ಟು ಕೊಂದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರು ಸಾಮಾಜಿಕ ಕಾರ್ಯಕರ್ತನೋರ್ವನನ್ನು ಗುಂಡುಟ್ಟು ಹತ್ಯೆಗೈದಿರುವ ಘಟನೆ ನಡೆದಿದೆ.

ಕುಪ್ವಾರಾಅ ಜಿಲ್ಲೆಯ ಕಂಡಿಖಾಸ್ ಪ್ರದೇಶದಲ್ಲಿ ರಸೂಲ್ ಮಗ್ರೆ (45) ಎಬ ಸಾಮಾಜಿಕ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ. ತಡರಾತ್ರಿ ರಸೂಲ್ ಮಗ್ರೆ ನಿವಾಸದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ರಸೂಲ್ ಗೆ ಹೊಟ್ಟೆ ಹಾಗೂ ಎಡ ಮಣಿಕಟ್ಟಿಗೆ ಗುಂಡೇಟು ತಗುಲಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕುಪ್ವಾರಾದ ಹಂದ್ವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಉಗ್ರರು ರಸೂಲ್ ಮಗ್ರೆಯನ್ನು ಗುಂಡಿಟ್ತು ಹತ್ಯೆ ಮಾಡಲು ಕಾರಣ ತಿಳಿದುಬಂದಿಲ್ಲ. ಭದ್ರತಾ ಪಡೆಗಳು ರಸೂಲ್ ನಿವಾಸಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular