HomeLatest Newsಮಾಜಿ ಸೈನಿಕರಿಗೆ ಗುಡ್ ನ್ಯೂಸ್: ಜಮೀನು, ನಿವೇಶನಕ್ಕೆ ಅರ್ಜಿ ಆಹ್ವಾನ

ಮಾಜಿ ಸೈನಿಕರಿಗೆ ಗುಡ್ ನ್ಯೂಸ್: ಜಮೀನು, ನಿವೇಶನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆ ತಾಲ್ಲೂಕು ವ್ಯಾಪ್ತಿಯ ಸೈನಿಕರು, ಮಾಜಿ ಸೈನಿಕರು ಸೈನಿಕರ ಕೋಟಾದಡಿ ಸರ್ಕಾರಿ ಜಮೀನು, ನಿವೇಶನ ಕೋರಿ ಫೆಬ್ರವರಿ 16 ವರೆಗೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು.

ಮಾನದಂಡ:

ಸೈನಿಕ ಸೇವೆಗೆ ನೇಮಕಾತಿಗೊಂಡಿರುವ ಬಗ್ಗೆ ದಾಖಲೆಗಳು ಸೈನಿಕ ಸೇವೆಯಿಂದ ನಿವೃತ್ತಿ ಹೊಂದಿದ್ದಲ್ಲಿ ಡಿಸ್ಟಾರ್ಜ್ ಸರ್ಟಿಫಿಕೆಟ್ ಹಾಗೂ ಈ ಹಿಂದಿನ ತಿಂಗಳ ಪಿಂಚಣಿ ವೇತನ ಪ್ರಮಾಣ ಪತ್ರ ಹಾಲಿ ಸೇವಾ ಸೈನಿಕರು ಈ ಹಿಂದಿನ ತಿಂಗಳ ವೇತನ ಪ್ರಮಾಣ ಪತ್ರ. ಸೈನಿಕ ಸೇವಾ ಅವಧಿಯಲ್ಲಿ ಅಂಗವಿಕಲತೆ ಆಗಿದ್ದಲ್ಲಿ, ಸಂಬಂಧಿಸಿದ ಪ್ರಾಧಿಕಾರದಿಂದ ಪ್ರಮಾಣ ಪತ್ರ. ಸೈನಿಕ ಸೇವೆಯಲ್ಲಿ ಸೇವೆ ಸಲ್ಲಿಸಿದ ಕುರಿತು ಸಂಬಂಧಿಸಿದ ಪ್ರಾಧಿಕಾರದಿಂದ ಸೇವಾ ಅವಧಿಯ ಕುರಿತು ದೃಢೀಕೃತ ಪತ್ರ,  ಸೇವಾ ಅವಧಿಯಲ್ಲಿ ಪಡೆದಿರುವ ಪದಕಗಳ ಹಾಗೂ ಇತ್ಯಾದಿ ದಾಖಲೆ.  ಸರ್ಕಾರದಿಂದ ನಿಗದಿಪಡಿಸಿರುವ ನಿಗದಿತ ನಮೂನೆ-14 ರಲ್ಲಿ ಎಲ್ಲಾ ಅಂಶಗಳ ಕುರಿತು ಮಾಹಿತಿಯನ್ನು ಭರ್ತಿ ಮಾಡಿ ಪಾಸ್‌ಪೋರ್ಟ್ ಫೋಟೋದೊಂದಿಗೆ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿದಾರರ ಕುಟುಂಬ ಈಗಾಗಲೇ ಜಮೀನು, ನಿವೇಶನ ಹೊಂದಿದ್ದಲ್ಲಿ ಸದರಿ ಜಮೀನುಗಳ, ನಿವೇಶನಗಳ ಮಾಹಿತಿಯನ್ನು ಒದಗಿಸುವುದು, ಇಲ್ಲದಿದ್ದಲ್ಲಿ ಯಾವುದೇ ಜಮೀನು, ನಿವೇಶನ ಇಲ್ಲವೆಂದು ರೂ. 100 ಮುಚ್ಚಳಿಕೆ ಪತ್ರ ನೀಡುವುದು. ಮಾಜಿ ಸೈನಿಕರು ಈಗಾಗಲೇ ಸೈನಿಕ ಹುದ್ದೆಯಿಂದ ನಿವೃತ್ತಿ ಹೊಂದಿ ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಸರ್ಕಾರಿ ಹುದ್ದೆಯಲ್ಲಿದ್ದಲ್ಲಿ ವಿವರ ನೀಡುವುದು. ಹಾಗೂ ಆದಾಯ ಪ್ರಮಾಣ ಪತ್ರ.  ಕುಟುಂಬದ ಸದಸ್ಯರೆಲ್ಲರ ಅಧಾರ್ ಕಾರ್ಡ್ ಸ್ವಯಂ ದೃಢೀಕೃತ ಪ್ರತಿ, ಕುಟುಂಬದ ರೇಷನ್ ಕಾರ್ಡ್ ಸ್ವಯಂ ದೃಢೀಕೃತ ಪ್ರತಿ, ಹಾಲಿ ವಾಸದ ವಿಳಾಸದ ಪುರಾವೆ ದಾಖಲೆ, ಅರ್ಜಿದಾರರು ಸೇರಿದಂತೆ ಕುಟುಂಬದ ಸದಸ್ಯರ ಆದಾಯ ತೆರಿಗೆ ಘೋಷಣಾ ಪ್ರತಿ ಅರ್ಜಿದಾರರ ಆದಾಯ ದೃಢೀಕರಣ ಪತ್ರ ಸಲ್ಲಿಸಬೇಕೆಂದು ತಹಶೀಲ್ದಾರ್ ಡಾ.ಅಶ್ವಥ್.ಎಂ.ಬಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular