ಬೆಂಗಳೂರು: ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಕಂದಾಯ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ನಿರ್ದೇಶನ ನೀಡಿದ್ದಾರೆ.
ರಾಜ್ಯದಲ್ಲಿನ ದೇವಾಲಯಗಳ ಜಿಲ್ಲಾವಾರು ಹಾಗೂ ಅಂತರ ಜಿಲ್ಲಾವಾರು ಪ್ರವಾಸಿ ಸರ್ಕ್ಯೂಟ್ ಗಳನ್ನು ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಅಗತ್ಯ/ ಪೂರಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದಾಗಿರುತ್ತದೆ.
1 ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯಗಳಿಗೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವುದು.
2 ದೇವಾಲಯಗಳಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳಾದ
a. ಉತ್ತಮವಾದ ಶೌಚಾಲಯ ವ್ಯವಸ್ಥೆ ಕಲ್ಪಿಸುವುದು.
b. ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು.
c. ನೆರಳಿನ ವ್ಯವಸ್ಥೆ ಕಲ್ಪಿಸುವುದು.
d. Common areaದಲ್ಲಿ ಸಿ.ಸಿ.ಟಿ.ವಿ.ಗಳನ್ನು ಅಳವಡಿಸುವುದು.
3. ಭಕ್ತಾದಿಗಳು ತಂಗಲು ಉತ್ತಮ ಕೊಠಡಿಗಳ ವ್ಯವಸ್ಥೆಯನ್ನು ಮಾಡುವುದು.
4. ದೇವಾಲಯಗಳಿಗೆ ಬರುವ ಭಕ್ತಾದಿಗಳ ವಾಹನಗಳನ್ನು ಸರಿಯಾಗಿ ಪಾರ್ಕಿಂಗ್ ಮಾಡದೇ ಇರುವುದರಿಂದ ಕೆಲವು ಕಡೆ ವಾಹನ ದಟ್ಟಣೆ (Traffic Jam) ಹಾಗೂ ಘರ್ಷಣೆಗಳು ಉಂಟಾಗುವ ಸಂಭವ ಇರುವುದರಿಂದ ಇದನ್ನು ತಡೆಗಟ್ಟುವ ಉದ್ದೇಶದಿಂದ ಏಜೆನ್ಸಿ ಮುಖಾಂತರ ಪಾರ್ಕಿಂಗ್ ಶುಲ್ಕ ಪಡೆದು ಸಮರ್ಪಕವಾಗಿ ವಾಹನಗಳ ನಿಲುಗಡೆ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಲು/ ನಿರ್ವಹಿಸಲು ಕ್ರಮ ವಹಿಸುವುದು.
5. ಪ್ರವರ್ಗ ‘ಎ’ ಮತ್ತು ‘ಬಿ’ ದೇವಾಲಯಗಳಲ್ಲಿ ಲಭ್ಯವಿರುವ ಭೂಮಿಯ ವಿವರಗಳನ್ನು ಸಂಗ್ರಹಿಸುವುದು.
6. ದೇವಾಲಯಗಳ ಸಮೀಪ ಇರುವ ಸರ್ಕಾರಿ ಜಮೀನುಗಳನ್ನು ಆಯಾ ದೇವಾಲಯಗಳ ಹೆಸರಿಗೆ ಕಾಯ್ದಿರಿಸಲು/ ಮಂಜೂರು ಮಾಡಲು ಕ್ರಮ ವಹಿಸುವುದು.
7. ದೇವಾಲಯಗಳ ಆಸ್ತಿಗಳ GPS Location with Latitude & Longitude ಅನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ (KSRSAC) ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು.
8. ಪ್ರವರ್ಗ ‘ಎ’ ಮತ್ತು ‘ಬಿ’ ದೇವಾಲಯಗಳಲ್ಲಿ ಲಭ್ಯವಿರುವ ಭೂಮಿಯ ವಿವರಗಳನ್ನು ಮೂಲಸೌಭ್ಯ(Infrastructure Development Department) : Empanel ಆದ Consultants ಮೂಲಕ ಸಮಗ್ರವಾದ ಕಾರ್ಯ ಸಾಧತಾ ವರದಿ / Master Plan ತಯಾರಿಸಲು ಕ್ರಮ ವಹಿಸುವುದು.
9. ದೇವಾಲಯಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿಸ್ತ್ರತ ಯೋಜನಾ ವರದಿಯನ್ನು (DPR) ಸಿದ್ಧಪಡಿಸುವುದು.
10. ದೇವಾಲಯಗಳಲ್ಲಿ ಛತ್ರ ಅತಿಥಿಗೃಹಗಳು ಹಾಗೂ ಇತರೆ ಮೂಲ ಸೌಕರ್ಯಗಳನ್ನು ದಾನಿಗಳ ಮೂಲಕ ನಿರ್ಮಾಣ ಮಾಡಲು ಕ್ರಮ ವಹಿಸುವುದು / ಉತ್ತೇಜನ ನೀಡುವುದು.
11. ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ನೀಡುವುದು.
12. ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ದೇವಾಲಯಗಳಲ್ಲಿ ನಡೆಯಲಿರುವ ಪ್ರಮುಖ ಉತ್ಸವ /ಕಾರ್ಯಕ್ರಮೆಗಳ ವಿವರಗಳನ್ನು ಕ್ಯಾಲೆಂಡರ್ಗಳಲ್ಲಿ ದಾಖಲಿಸುವುದು.
13. ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಲ್ಲಿ ಪ್ರವಾಸೋಧಮಕ್ಕೆ ಉತ್ತೇಜನ ನೀಡುವುದು.
ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಪಾಲಿಸಿರುವ ಕುರಿತು ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಪ್ರಗತಿಯನ್ನು ನಿಯಮಿತವಾಗಿ (on regular basis) ಪರಿಶೀಲಿಸತಕ್ಕದ್ದು ಎಂದು ತಿಳಿಸಿದ್ದಾರೆ.

