ಹಾಸನ: ಮದುವೆ ಮನೆಯಲ್ಲಿ ಕುರ್ಚಿ ವಿಚಾರಕ್ಕೆ ರೌಡಿಶೀಟರ್ ಕಿರಿಕ್ ಮಾಡಿದ್ದಾನೆ. ಊಟದ ಬಳಿಕ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ದಿವಾಕರ ಎಂಬಾತನ ಮೇಲೆ ರೌಡಿಶೀಟರ್ ಭರತ್ ಹಲ್ಲೆ ಮಾಡಿದ್ದಾನೆ. ಹಾಸನ ಜಿಲ್ಲೆಯ ಬೇಲೂರಿನ ಜೆಪಿ ನಗರದ ಬಳಿ ಘಟನೆ ನಡೆದಿದೆ. ತಂಡೆಕೆರೆ ಗ್ರಾಮದ ದಿವಾಕರ್ ಮೇಲೆ ರಾಮೇನಹಳ್ಳಿಯ ಭರತ್ ಹಲ್ಲೆ ಮಾಡಿದ್ದಾನೆ.
ಊಟಕ್ಕೆ ಕುಳಿತಾಗ ಸ್ನೇಹಿತನಿಗೆ ದಿವಾಕರ ಸೀಟ್ ಹಿಡಿದುಕೊಂಡಿದ್ದ. ಈ ವೇಳೆ ತನಗೆ ಕುರ್ಚಿ ಬಿಡುವಂತೆ ರೌಡಿಶೀಟರ್ ಭರತ್ ಕಿರಿಕ್ ಮಾಡಿದ್ದ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ದಿವಾಕರ ಊಟ ಮುಗಿಸಿ ಹೊರ ಬರುತ್ತಿದ್ದಂತೆ ಚಾಕುವಿನಿಂದ ದಾಳಿ ನಡೆಸಲಾಗಿದೆ.
ದಿವಾಕರ್ ತಲೆಗೆ ಬಲವಾಗಿ ರೌಡಿಶೀಟರ್ ಭರತ್ ಹಲ್ಲೆ ನಡೆಸಿದ್ದಾನೆ. ರೌಡಿಶೀಟರ್ ವಿರುದ್ಧ ಈಗಾಗಲೇ ನಾಲ್ಕು ಪ್ರಕರಣಗಳಿವೆ. ರೌಡಿಶೀಟರ್ ಭರತ್ ನನ್ನು ಬೇಲೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಿವಾಕರ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

