HomeKarnatakaಪ್ರಯಾಣಿಕರಿಗೆ ಗುಡ್ ನ್ಯೂಸ್ : ಇಂದಿನಿಂದ 'ನಮ್ಮ ಮೆಟ್ರೋ'ದಲ್ಲಿ ‘NCMC’ ಕಾರ್ಡ್ ಲಭ್ಯ

ಪ್ರಯಾಣಿಕರಿಗೆ ಗುಡ್ ನ್ಯೂಸ್ : ಇಂದಿನಿಂದ ‘ನಮ್ಮ ಮೆಟ್ರೋ’ದಲ್ಲಿ ‘NCMC’ ಕಾರ್ಡ್ ಲಭ್ಯ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಇಂದಿನಿಂದ ( ಆಗಸ್ಟ್ 21)   ನಮ್ಮ ಮೆಟ್ರೋದಲ್ಲಿ ‘NCMC’ ಕಾರ್ಡ್ ಲಭ್ಯವಾಗಲಿದೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ (NCMC) ಗೆ ಬಿಎಂಆರ್ಸಿಎಲ್ ಇಂದು ಚಾಲನೆ ನೀಡಿದ್ದು, ಬೆಂಗಳೂರಿನ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಆಗಸ್ಟ್ 21ರಿಂದ ಇಂದಿನಿಂದ ಲಭ್ಯವಾಗಲಿದೆ. ಇದನ್ನು ಎಲ್ಲಾ ಸಾರಿಗೆ ವ್ಯವಸ್ಥೆ, ಪೆಟ್ರೋಲ್ ಬಂಕ್ ಮತ್ತು ಮಾಲ್ ಗಳಲ್ಲಿ ಬಳಸಬಹುದಾಗಿದೆ.

ಎನ್.ಸಿ.ಎಂ.ಸಿ. ಕಾರ್ಡ್ ಗಳಿಗೆ 50 ರೂಪಾಯಿ ದರವಿದ್ದು, ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಪ್ರಯಾಣದ ಶೇಕಡ 5 ರಷ್ಟು ರಿಯಾಯಿತಿ ಸಿಗಲಿದೆ. ಪ್ರಯಾಣಿಕರು ಕಾರ್ಡ್ ಪಡೆಯಲು nammametro.agsindia.com ವೆಬ್ಸೈಟ್ ಅಥವಾ BMRCL RBL Bank NCMC ಮೊಬೈಲ್ ಆಪ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮೆಟ್ರೋ ಟಿಕೆಟ್ ಕೌಂಟರ್ ನಲ್ಲಿ ತಿಳಿಸಬೇಕಿದೆ.ಎನ್.ಸಿ.ಎಂ.ಸಿ. ಕಾರ್ಡ್ ಆರ್.ಬಿ.ಎಲ್. ಬ್ಯಾಂಕ್ ನ ಎಲ್ಲಾ ಶಾಖೆಗಳಲ್ಲೂ ಸಿಗಲಿದೆ. ಈ ಕಾರ್ಡ್ ದೇಶದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ, ಪೆಟ್ರೋಲ್ ಬಂಕ್, ಶಾಪಿಂಗ್ ಮಾಲ್, ದಿನಸಿ ಮಳಿಗೆಗಳಲ್ಲಿಯೂ ಬಳಕೆ ಮಾಡಬಹುದು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular