HomeKarnatakaಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಒಟ್ಟಿಗೆ 2 ತಿಂಗಳ ಪಡಿತರ...

ಬಿಪಿಎಲ್, ಅಂತ್ಯೋದಯ ಕಾರ್ಡ್ ಸೇರಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಒಟ್ಟಿಗೆ 2 ತಿಂಗಳ ಪಡಿತರ ವಿತರಣೆ

ಮೇ-2026ರ ಮಾಹೆಯಲ್ಲಿ ಎನ್.ಎಫ್.ಎಸ್.ಎ.(NFSA) ಯೋಜನೆಯಡಿ ಮೇ ಮತ್ತು ಜೂನ್ ತಿಂಗಳ ಎರಡು ತಿಂಗಳ ಪಡಿತರವನ್ನು ಒಟ್ಟಾಗಿ ವಿತರಿಸಲು ಸರ್ಕಾರ ಆದೇಶಿಸಿದೆ.

ದಾವಣಗೆರೆ ಜಿಲ್ಲೆಯ ಪಡಿತರ ಚೀಟಿದಾರರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಅಂತ್ಯೋದಯ(AAY) ಕಾರ್ಡ್: ಪ್ರತಿ ಕಾರ್ಡಿಗೆ 28 ಕೆ.ಜಿ ಅಕ್ಕಿ ಮತ್ತು 42 ಕೆ.ಜಿ ರಾಗಿ ವಿತರಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದ್ಯತಾ ಪಡಿತರ ಚೀಟಿ (PHH/BPL): ಪ್ರತಿ ಸದಸ್ಯರಿಗೆ 04 ಕೆ.ಜಿ ಅಕ್ಕಿ ಮತ್ತು 06 ಕೆ.ಜಿ ರಾಗಿ ವಿತರಿಸಲಾಗುವುದು. ರಾಜ್ಯ ಪಡಿತರ ಚೀಟಿ (State Cards): ಪ್ರತಿ ಸದಸ್ಯರಿಗೆ 10 ಕೆ.ಜಿ ಅಕ್ಕಿ ಮಾತ್ರ ಉಚಿತವಾಗಿ ನೀಡಲಾಗುವುದು.

ಫಲಾನುಭವಿಗಳು ಮೇ ಮತ್ತು ಜೂನ್ ಮಾಹೆಯ ಪಡಿತರಕ್ಕಾಗಿ ಎರಡು ಬಾರಿ ಬಯೋ ಮೆಟ್ರಿಕ್ ದೃಢೀಕರಣ ನೀಡಬೇಕಾಗುತ್ತದೆ. ಪಡಿತರ ಪಡೆಯುವಾಗ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಪ್ರತಿ ಪಡಿತರ ಚೀಟಿದಾರರು ಬಯೋ ದೃಢೀಕರಣ ನೀಡಿದ ತಕ್ಷಣ ನ್ಯಾಯಬೆಲೆ ಅಂಗಡಿಯಿಂದ ಕಂಪ್ಯೂಟರ್ ರಸೀದಿಯನ್ನು ಪಡೆದು, ಅದರಲ್ಲಿರುವ ಪ್ರಮಾಣದಂತೆ ಆಹಾರಧಾನ್ಯ ಪಡೆಯಬೇಕು. ನ್ಯಾಯಬೆಲೆ ಅಂಗಡಿಕಾರರು ಪಡಿತರ ವಿತರಣೆಯ ನಂತರ ಕಡ್ಡಾಯವಾಗಿ ಪ್ರತ್ಯೇಕ ರಶೀದಿ ನೀಡುವಂತೆ ಈಗಾಗಲೇ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ದಾವಣಗೆರೆ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆ 08192-251552 ಅನ್ನು ಸಂಪರ್ಕಿಸಬಹುದು ಎಂದು ಜಂಟಿ ನಿರ್ದೇಶಕರಾದ ಮಧುಸೂಧನ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular