ಬೆಂಗಳೂರು: ಮದ್ಯಪ್ರಿಯರಿಗೆ ನಮ್ಮ ಮೆಟ್ರೋ ರೈಲು ನಿಗಮ -ಬಿಎಂಆರ್‌ಸಿಎಲ್ ಸಿಹಿ ಸುದ್ದಿ ನೀಡಲು ಮುಂದಾಗಿದೆ. ದೆಹಲಿ ಮೆಟ್ರೋ ರೀತಿಯಲ್ಲಿ ನಮ್ಮ ಮೆಟ್ರೋದಲ್ಲಿಯೂ ಪ್ರಯಾಣಿಕರಿಗೆ ಸೀಲ್ ಮಾಡಿದ ಮದ್ಯದ ಬಾಟಲಿ ತೆಗೆದುಕೊಂಡು ಹೋಗಲು ಅನುಮತಿ ನೀಡುವ ಕುರಿತಾಗಿ ಬಿಎಂಆರ್‌ಸಿಎಲ್ ಸಭೆಯಲ್ಲಿ ಚರ್ಚೆ ನಡೆದಿದೆ.
ಸಂಪೂರ್ಣವಾಗಿ ಪ್ಯಾಕ್ ಮಾಡಿದ ಮದ್ಯದ ಬಾಟಲಿಗಳನ್ನು ನಮ್ಮ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸುವವರು ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು. ಇದಕ್ಕೆ ಬಿಎಂಆರ್‌ಸಿಎಲ್ ನಿಂದ ತಾತ್ವಿಕ ಒಪ್ಪಿಗೆ ನೀಡಲಾಗಿದೆ.
ಅನುಮೋದನೆ ದೊರೆತ ನಂತರ ಪ್ರಯಾಣಿಕರಿಗೆ ಸಂಪೂರ್ಣ ಪ್ಯಾಕ್ ಮಾಡಿದ ಮದ್ಯದ ಬಾಟಲಿ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.

