ಮಂಡ್ಯ: ನಾಡ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಛಿದ್ರವಾದ ಘಟನೆ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹರಳಹಳ್ಳಿಯ ರಾಜಮಣ್ಣಿ ಎಂಬುವವರ ಹಸುವಿನ ಬಾಯಿ ಛಿದ್ರವಾಗಿದೆ. ಗ್ರಾಮದ ಸಮೀಪ ಜಮೀನೊಂದರಲ್ಲಿ ಹಸು ಮೇಯುತ್ತಿದ್ದಾಗ ನಾಡಬಾಂಬ್ ಸ್ಪೋಟಗೊಂಡು ಘಟನೆ ನಡೆದಿದೆ. ಸ್ಥಳಕ್ಕೆ ಕೆಎಂ ದೊಡ್ಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಎಂ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

