HomeLatest News10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್: ಗೃಹರಕ್ಷಕ ದಳ ಸೇರಲು ಅರ್ಜಿ ಆಹ್ವಾನ

10ನೇ ತರಗತಿ ಪಾಸಾದವರಿಗೆ ಗುಡ್ ನ್ಯೂಸ್: ಗೃಹರಕ್ಷಕ ದಳ ಸೇರಲು ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಸ್ಥಳೀಯ ವಿವಿಧ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ “ನಿಷ್ಕಾಮ ಸೇವೆ ದ್ಯೇಯದ” ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ದರಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಗೃಹರಕ್ಷಕರಾಗಲು ಬೇಕಾದ ಆರ್ಹತೆ:

ಭಾರತೀಯ ಪ್ರಜೆಯಾಗಿರಬೇಕು. 19 ವರ್ಷದ ಮೇಲ್ಪಟ್ಟು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು /ಆರೋಪ ಅಥವಾ ಅಪರಾಧಿ ಎಂದು ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಸಕ್ತರು ನಿಗದಿತ ಅರ್ಜಿಯನ್ನು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಿವಮೊಗ್ಗ. 08182 – 295630 & 255630 ಅಥವಾ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳ ಘಟಕ/ ಉಪ ಘಟಕಗಳ ಕಛೇರಿಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಫೆ. 3 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟರು ಡಾ. ಚೇತನ ಹೆಚ್.ಪಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಗೃಹರಕ್ಷಕ ದಳ ಘಟಕ ಉಪ ಘಟಕ ಮತ್ತು ಘಟಕಾಧಿಕಾರಿಗಳು ಮೊಬೈಲ್ ನಂಬರ್‌ನ್ನು ಸಂಪರ್ಕಿಸುವುದು.

ಶಿವಮೊಗ್ಗ, ಹೆಚ್.ಸಿ.ಶ್ರೀಧರ ಮೂರ್ತಿ-9964157471, ಕುಂಸಿ- ಎಂ.ಕುಮಾರ- 8197013844, ಹಾರನಹಳ್ಳಿ -ಜಿ.ರುದ್ರೇಶ್ -9972163398, ಭದ್ರಾವತಿ -ಜಗದೀಶ-9900283490, ಹೊಳೆಹೊನ್ನೂರು- ಅಕ್ರಾಉಲ್ಲಾ-9986104590, ತೀರ್ಥಹಳ್ಳಿ – ದಿಲೀಪ್ ಬಿ.ಎನ್. -7975957665, ಸಾಗರ – ಕೆ.ಎಸ್.ಮಂಜುನಾಥ – 8073831409, ಜೋಗ – ಡಿ.ಸಿದ್ದರಾಜು – 9449699459, ಶಿಕಾರಿಪುರ- ಕೆ.ವಿ.ಮಹೇಶ-9901325146, ಶಿರಾಳಕೊಪ್ಪ -ಎಂ.ವೀರಭದ್ರಸ್ವಾಮಿ-9741629961, ಹೊಸನಗರ- ಎಂ.ಅರ್.ಟೀಕಪ್ಪ-9901002423, ರಿಪ್ಪನ್‌ಪೇಟೆ -ಟಿ ಶಶಿಧರ್ ಆಚಾರ್ಯ್-9741477689, ಸೊರಬ- ಹೆಚ್.ಎಂ.ಪ್ರಶಾಂತ್, 7976306266.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular