
ಒಟ್ಟು 15 ಫಲಾನುಭವಿಗಳ ಗುರಿ ನಿಗದಿಪಡಿಸಲಾಗಿದ್ದು, ಬ್ಯಾಂಕ್ ವಿಧಿಸುವ ಶೇ.07ರ ಮೇಲ್ಪಟ್ಟು ಶೇಕಡವಾರು ಬಡ್ಡಿ ಮೊತ್ತವನ್ನು (ಬಡ್ಡಿಸಹಾಯಧನ) ಈ ಯೋಜನೆಯಿಂದ ಭರಿಸಲಾಗುತ್ತದೆ.
ನಿಗಧಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ ನ.27ರೊಳಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಸಲ್ಲಿಸಬೇಕು.ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ಕಾರ್ಡ್, ಯೋಜನಾ ವರದಿ, ಪಾಸ್ಪೋರ್ಟ್ ಅಳತೆಯ ಎರಡು ಭಾವಚಿತ್ರಗಳು, ಸ್ವ-ಸಹಾಯ ಗುಂಪುಗಳ ಭಾವಚಿತ್ರ, ಗುಂಪಿಗೆ ಸಂಬಂಧಪಟ್ಟ ದಾಖಲೆ ಮತ್ತು ಯೋಜನಾ ವರದಿ ಪ್ರತಿಯನ್ನು ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಸಂಪರ್ಕಿಸಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ.ದುರುಗಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

