ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಡಿಯಲ್ಲಿ ಬರುವ ಡೈರೆಕ್ಟರ್ ಜನರಲ್ (ಏರೋನಾಟಿಕಲ್ ಸಿಸ್ಟಮ್ಸ್) ಲ್ಯಾಬ್‌ಗಳಲ್ಲಿ, ‘ಪೇಯ್ಡ್ ಇಂಟರ್ನ್‌ಶಿಪ್ ಸ್ಕೀಮ್ 2026-27’ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಂಜಿನಿಯರಿಂಗ್ ಮತ್ತು ಸೈನ್ಸ್ ವಿಭಾಗಗಳಲ್ಲಿ ಅಂತಿಮ ವರ್ಷದ ಪದವಿ (UG) ಅಥವಾ ಸ್ನಾತಕೋತ್ತರ (PG) ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.
ಒಟ್ಟು 200 ಇಂಟರ್ನ್‌ಶಿಪ್‌ಗಳನ್ನು ಒದಗಿಸಲಾಗುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ADE, ADRDE, CABS, CEMILAC ಮತ್ತು GTRE ಲ್ಯಾಬ್‌ಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 5, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಲ್ಯಾಬ್‌ವಾರು ಖಾಲಿ ಹುದ್ದೆಗಳ ವಿವರ:
- ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADE), ಬೆಂಗಳೂರು: 69
- ಸೆಂಟರ್ ಫಾರ್ ಏರ್‌ಬೋರ್ನ್ ಸಿಸ್ಟಮ್ಸ್ (CABS), ಬೆಂಗಳೂರು: 60
- ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (GTRE), ಬೆಂಗಳೂರು: 31
- ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADRDE), ಆಗ್ರಾ: 20
- ಸೆಂಟರ್ ಫಾರ್ ಮಿಲಿಟರಿ ಏರ್‌ವರ್ದಿನೆಸ್ ಅಂಡ್ ಸರ್ಟಿಫಿಕೇಶನ್ (CEMILAC), ಬೆಂಗಳೂರು: 20
ಅರ್ಹತೆ ಮತ್ತು ವಿವರಗಳು:
- ವಿದ್ಯಾರ್ಹತೆ: ಇಂಜಿನಿಯರಿಂಗ್ ಅಥವಾ ಸೈನ್ಸ್ ವಿಭಾಗದ ಅಂತಿಮ ವರ್ಷದ UG ಅಥವಾ PG ವಿದ್ಯಾರ್ಥಿಗಳು.
- ವಿಷಯಗಳು: CSE/IT, ಏರೋ, ಮೆಕ್ಯಾನಿಕಲ್, EEE, ECE, ಇನ್ಸ್ಟ್ರುಮೆಂಟೇಶನ್, ಮೆಟಲರ್ಜಿ, ಕೆಮಿಕಲ್ ಇಂಜಿನಿಯರಿಂಗ್, ಡೇಟಾ ಸೈನ್ಸ್, ಟೆಕ್ಸ್‌ಟೈಲ್/ಪಾಲಿಮರ್ ಸೈನ್ಸ್ ಇತ್ಯಾದಿ.
- ಅಂಕಗಳು: ವಿದ್ಯಾರ್ಥಿಗಳು ಕನಿಷ್ಠ 6.5 CGPA ಹೊಂದಿರಬೇಕು.
- ದಾಖಲೆಗಳು: UG ವಿದ್ಯಾರ್ಥಿಗಳು 6ನೇ ಸೆಮಿಸ್ಟರ್ ಅಂಕಪಟ್ಟಿ, PG ವಿದ್ಯಾರ್ಥಿಗಳು 2ನೇ ಸೆಮಿಸ್ಟರ್ ಅಂಕಪಟ್ಟಿಯನ್ನು ಸಲ್ಲಿಸಬೇಕು.
- ಅರ್ಜಿ ಸಲ್ಲಿಕೆ ದಿನಾಂಕ: ಮೇ 25, 2026 ರಿಂದ ಜೂನ್ 5, 2026 ರವರೆಗೆ.
- ಇಂಟರ್ನ್‌ಶಿಪ್ ಅವಧಿ: 6 ತಿಂಗಳು.
- ಸ್ಟೈಫಂಡ್: 6 ತಿಂಗಳ ಅವಧಿಗೆ ಒಟ್ಟು ₹30,000 ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ ಅಪ್ಲಿಕೇಶನ್ ಫಾರ್ಮ್ಯಾಟ್ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಈ ಫಾರ್ಮ್ ಮೇಲೆ ಕಾಲೇಜಿನ HOD ಅಥವಾ ಪ್ರಿನ್ಸಿಪಾಲ್ ಅವರ ಸಹಿ ಪಡೆಯಬೇಕು. ನಂತರ ರೆಸ್ಯೂಮೆ, ಕಾಲೇಜಿನ ಅನುಮತಿ ಪತ್ರ, ಆಧಾರ್ ಕಾರ್ಡ್ ಮತ್ತು ಅಂಕಪಟ್ಟಿಗಳ ಪಿಡಿಎಫ್ (PDF) ಪ್ರತಿಯನ್ನು ಸಂಬಂಧಪಟ್ಟ ಲ್ಯಾಬ್‌ನ ಅಧಿಕೃತ ಇಮೇಲ್ ಐಡಿಗೆ ಕಳುಹಿಸಬೇಕು. ನೀವು ಒಂದಕ್ಕಿಂತ ಹೆಚ್ಚು ಲ್ಯಾಬ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ, ಪ್ರತ್ಯೇಕವಾಗಿ ಇಮೇಲ್ ಮಾಡಬೇಕಾಗುತ್ತದೆ.

