ಬೆಂಗಳೂರು: ಕಳೆದ ಹಲವು ವಹಿವಾಟುಗಳಲ್ಲಿ ಇಳಿಕೆಯ ಹಾದಿ ಹಿಡಿದು ಗ್ರಾಹಕರ ಜೇಬಿಗೆ ಕೊಂಚ ನೆಮ್ಮದಿ ನೀಡಿದ್ದ ಹಳದಿ ಲೋಹದ ಬೆಲೆ ಇಂದು ದಿಢೀರ್ ಏರಿಕೆಯಾಗಿದೆ. ಮಂಗಳವಾರ (ಮೇ 12, 2026) ಬಂಗಾರದ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಆಭರಣ ಪ್ರಿಯರಿಗೆ ಹಾಗೂ ಹೂಡಿಕೆದಾರರಿಗೆ ಆತಂಕ ತಂದೊಡ್ಡಿದೆ. ಇಂದು ಮಂಗಳವಾರ ಬಂಗಾರದ ದರದಲ್ಲಿ ಗ್ರಾಮ್ಗೆ 170 ರೂ ಹೆಚ್ಚಳವಾಗಿದೆ.ಬಂಗಾರದ ಜೊತೆಗೆ ಬೆಳ್ಳಿಯ ಬೆಲೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ಖರೀದಿದಾರರ ಬಜೆಟ್ ಮೇಲೆ ನೇರ ಹೊರೆ ಬಿದ್ದಿದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮೇ 12ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,398 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,115 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,410 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 300 ರೂ
ಇಂದಿನ ಮಾರುಕಟ್ಟೆ ದರ ಎಷ್ಟು?
ಭಾರತದ ಮಾರುಕಟ್ಟೆಯಲ್ಲಿ ಎಂಸಿಎಕ್ಸ್ (MCX) ವಹಿವಾಟಿನ ಪ್ರಕಾರ ಬೆಲೆಗಳು ಈ ಕೆಳಗಿನಂತಿವೆ:
ಚಿನ್ನ: 10 ಗ್ರಾಂ ಚಿನ್ನದ ದರದಲ್ಲಿ 0.3% ಹೆಚ್ಚಳವಾಗಿದ್ದು, ಪ್ರತಿ 10 ಗ್ರಾಂಗೆ 1,54,150 ರೂಪಾಯಿ ತಲುಪಿದೆ.
ಬೆಳ್ಳಿ: ಬೆಳ್ಳಿಯ ಬೆಲೆ ಬರೋಬ್ಬರಿ 1.5% ರಷ್ಟು ಏರಿಕೆ ಕಂಡಿದ್ದು, ಒಂದು ಕೆಜಿ ಬೆಳ್ಳಿಯ ದರ ಈಗ 2,82,463 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ.
ಬೆಲೆ ಏರಿಕೆಗೆ ಕಾರಣಗಳೇನು?
ಅಮೂಲ್ಯ ಲೋಹಗಳ ಈ ದಿಢೀರ್ ಏರಿಕೆಯ ಹಿಂದೆ ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳು ಪ್ರಮುಖ ಪಾತ್ರ ವಹಿಸಿವೆ:
ಮಧ್ಯಪ್ರಾಚ್ಯ ಬಿಕ್ಕಟ್ಟು: ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದ ಮುರಿದು ಬಿದ್ದ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಉದ್ವಿಗ್ನತೆ ಮುಂದುವರೆದಿದೆ.
ಕಚ್ಚಾ ತೈಲ ದರ: ಯುದ್ಧದ ಭೀತಿಯಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಕಂಡಿದ್ದು, ಇದು ನೇರವಾಗಿ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ.
ರೂಪಾಯಿ ಮೌಲ್ಯ ಕುಸಿತ: ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ದುರ್ಬಲಗೊಂಡಿರುವುದು ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಾಗಲು ಕಾರಣವಾಗಿದೆ.ಈ ಬೆಳವಣಿಗೆಯಿಂದಾಗಿ ಭಾರತದ ಪ್ರಮುಖ ನಗರಗಳಲ್ಲಿ ಆಭರಣ ಚಿನ್ನ ಹಾಗೂ ಶುದ್ಧ ಚಿನ್ನದ ಬೆಲೆ ಗಗನಕ್ಕೇರಿದ್ದು, ಸದ್ಯಕ್ಕೆ ಇಳಿಕೆಯ ಲಕ್ಷಣಗಳು ಕಂಡುಬರುತ್ತಿಲ್ಲ.
ಭಾರತದ ಪ್ರಮುಖ ನಗರದಲ್ಲಿ ಚಿನ್ನದ ಬೆಲೆ (1 ಗ್ರಾಂ)ನಗರ24 ಕ್ಯಾರಟ್ ಚಿನ್ನದ ದರ (1 ಗ್ರಾಂ)
ಚೆನ್ನೈ ₹15,633
ಮುಂಬೈ ₹15,398
ದೆಹಲಿ ₹15,413
ಕೋಲ್ಕತ್ತಾ ₹15,398
ಬೆಂಗಳೂರು ₹15,398
ಹೈದರಾಬಾದ್ ₹15,398
ಕೇರಳ ₹15,398
ಪುಣೆ ₹15,398
ವಡೋದರಾ ₹15,403
ಅಹಮದಾಬಾದ್ ₹15,403

