ಸಣ್ಣ ಪ್ರಮಾಣದ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಭಾರಿ ಏರಿಕೆಯ ಹಾದಿಗೆ ಮರಳಿದೆ. ಮಂಗಳವಾರ (ಆಗಸ್ಟ್ 11, 2026) ಒಂದೇ ದಿನ 24 ಕ್ಯಾರೆಟ್ ಚಿನ್ನದ ದರದಲ್ಲಿ ಗ್ರಾಂಗೆ ₹316 ಹೆಚ್ಚಳವಾಗಿದ್ದರೆ, 22 ಕ್ಯಾರೆಟ್ ಚಿನ್ನದ ದರ ₹290 ರಷ್ಟು ಏರಿಕೆಯಾಗಿದೆ. ಇದರೊಂದಿಗೆ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಮತ್ತೆ ಸುವರ್ಣ ಜಿಗಿತ ಕಂಡುಬಂದಿದೆ.
ಆಗಸ್ಟ್ ತಿಂಗಳ ಆರಂಭದಿಂದಲೂ ಏರುಗತಿಯಲ್ಲಿದ್ದ ಬಂಗಾರದ ದರ, ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಜಾಗತಿಕ ರಾಜಕೀಯ ಉದ್ವಿಗ್ನತೆ ಹಾಗೂ ಅಮೆರಿಕದ ಹಣದುಬ್ಬರದ ದತ್ತಾಂಶ ಬಿಡುಗಡೆಯ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ವಾರವೂ ಅದೇ ಟ್ರೆಂಡ್ ಮುಂದುವರಿಸಿದೆ.
ಇಂದಿನ ಚಿನ್ನದ ದರ – ಆಗಸ್ಟ್ 11, 2026
22 ಕ್ಯಾರೆಟ್ (ಆಭರಣ ಚಿನ್ನ): ₹14,220/ಗ್ರಾಂ ₹1,42,200/10 ಗ್ರಾಂ ಏರಿಕೆ: ₹290
24 ಕ್ಯಾರೆಟ್ (ಅಪರಂಜಿ ಚಿನ್ನ): ₹15,513/ಗ್ರಾಂ ₹1,55,130/10 ಗ್ರಾಂ ಏರಿಕೆ: ₹316
18 ಕ್ಯಾರೆಟ್ ಚಿನ್ನ: ₹11,635/ಗ್ರಾಂ ₹1,16,350/10 ಗ್ರಾಂ ಏರಿಕೆ: ₹237
ಬೆಳ್ಳಿ ದರದಲ್ಲೂ ಭಾರಿ ಜಿಗಿತ:
ಚಿನ್ನದ ದರ ಏರಿಕೆಯ ಬೆನ್ನಲ್ಲೇ ಬೆಳ್ಳಿ ಬೆಲೆಯಲ್ಲೂ ಭಾರಿ ಹೆಚ್ಚಳ ದಾಖಲಾಗಿದೆ. ಇವತ್ತು ಒಂದೇ ದಿನ ಬೆಳ್ಳಿ ಬೆಲೆ ಗ್ರಾಂಗೆ ₹10 ರಷ್ಟು ಏರಿಕೆಯಾಗಿದ್ದು, ಪ್ರಸ್ತುತ 1 ಗ್ರಾಂ ಬೆಳ್ಳಿ ಬೆಲೆ ₹255 ಹಾಗೂ 1 ಕೆಜಿ ಬೆಳ್ಳಿ ದರ ₹2,55,000 ತಲುಪಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತ, ಅಮೆರಿಕ-ಇರಾನ್ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಜಾಗತಿಕ ಆರ್ಥಿಕ ವಿದ್ಯಮಾನಗಳು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಆಕರ್ಷಿಸುತ್ತಿರುವುದು ಈ ಸತತ ದರ ಏರಿಕೆಗೆ ಮುಖ್ಯ ಕಾರಣವಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ನಗರಗಳ ಹೆಸರು ಚಿನ್ನದ ಬೆಲೆ (10 ಗ್ರಾಂ)
ಬೆಂಗಳೂರು ₹1,55,130
ನಾಗ್ಪುರ ₹1,55,130
ಮುಂಬೈ ₹1,55,130
ಚೆನ್ನೈ ₹1,55,460
ಕೋಲ್ಕತ್ತಾ ₹1,55,130
ಪಾಟ್ನಾ ₹1,55,180
ಸೂರತ್ ₹1,55,180
ಚಂಡೀಗಢ ₹1,55,280
ಲಕ್ನೋ ₹1,55,280

