HomeBusinessಬೆಳ್ಳಿ, ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: 57 ಸಾವಿರ ರೂ. ದಾಟಿದ ಚಿನ್ನದ ದರ; 74500...

ಬೆಳ್ಳಿ, ಚಿನ್ನಾಭರಣ ಖರೀದಿದಾರರಿಗೆ ಬಿಗ್ ಶಾಕ್: 57 ಸಾವಿರ ರೂ. ದಾಟಿದ ಚಿನ್ನದ ದರ; 74500 ರೂ.ಗೆ ತಲುಪಿದ ಬೆಳ್ಳಿ

ಬೆಂಗಳೂರು: ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ದರ ಶುಕ್ರವಾರ 10 ಗ್ರಾಂ ಗೆ 350 ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ದರ ಕೆಜಿಗೆ 1 ಸಾವಿರ ರೂಪಾಯಿ ಹೆಚ್ಚಳವಾಗಿದೆ.

ಇದರೊಂದಿಗೆ 24 ಕ್ಯಾರಟ್ ಚಿನ್ನದ ದರ 57,160 ರೂಪಾಯಿಗೆ ತಲುಪಿದೆ. 22 ಕ್ಯಾರಟ್ ನ ಆಭರಣ ಚಿನ್ನದ ದರ 52,400 ರೂ.ಗೆ ಏರಿಕೆಯಾಗಿದೆ. ಕೆಜಿಗೆ 1000 ರೂ. ಹೆಚ್ಚಳವಾಗಿರುವ ಬೆಳ್ಳಿ ದರ 74,500 ರೂ.ಗೆ ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸಕ್ತ ವರ್ಷದಲ್ಲಿ ಚಿನ್ನದ ದರ ಏರುಗತಿಯಲ್ಲಿ ಮುಂದುವರೆಯಲಿದೆ. ಅಮೆರಿಕದಲ್ಲಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದ್ದು, ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಹೆಚ್ಚಿಸತೊಡಗಿದ್ದಾರೆ. ಹೀಗಾಗಿ ಚಿನ್ನದ ದರ ಇನ್ನಷ್ಟು ಹೆಚ್ಚಳವಾಗಬಹುದೆಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular