ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಗಳಿಂದಾಗಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡಿದ್ದು, ಬೆಲೆ ಗಗನಕ್ಕೇರಲು ಕಾರಣವಾಗಿದೆ.
ಇಂದಿನ ದರ ಏರಿಕೆ ವಿವರ (ಏಪ್ರಿಲ್ 8, 2026):
ಇಂದು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 3,980 ರೂಪಾಯಿ ಏರಿಕೆಯಾಗಿದ್ದು, ಒಟ್ಟು ಬೆಲೆ 1,53,820 ರೂಪಾಯಿಗೆ ತಲುಪಿದೆ. ಇನ್ನು 1 ಗ್ರಾಂ ಚಿನ್ನದ ಬೆಲೆ 398 ರೂ. ಹೆಚ್ಚಳದೊಂದಿಗೆ 15,382 ರೂಪಾಯಿ ದಾಖಲಾಗಿದೆ.
ಇಂದಿನ 24 ಕ್ಯಾರೆಟ್ ಚಿನ್ನದ ದರ ಪಟ್ಟಿ (Gold Rate List):
1 ಗ್ರಾಂ: ₹15,382 (ನಿನ್ನೆಗಿಂತ +₹398 ಏರಿಕೆ)
8 ಗ್ರಾಂ : ₹1,23,056 (ನಿನ್ನೆಗಿಂತ +₹3,184 ಏರಿಕೆ)
10 ಗ್ರಾಂ: ₹1,53,820 (ನಿನ್ನೆಗಿಂತ +₹3,980 ಏರಿಕೆ)
100 ಗ್ರಾಂ: ₹15,38,200 (ನಿನ್ನೆಗಿಂತ +₹39,800 ಏರಿಕೆ)
ಈ ಮೇಲಿನ ದರಗಳು ಮಾರುಕಟ್ಟೆಯ ಇಂದಿನ ಆರಂಭಿಕ ದರಗಳಾಗಿದ್ದು, ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಒಳಗೊಂಡಿರುವುದಿಲ್ಲ. ನಗರದಿಂದ ನಗರಕ್ಕೆ ದರಗಳಲ್ಲಿ ಅಲ್ಪ ವ್ಯತ್ಯಾಸವಿರಬಹುದು.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?
ಅಂತಾರಾಷ್ಟ್ರೀಯ ವಿದ್ಯಮಾನ: ಅಮೆರಿಕ-ಇರಾನ್ ಕದನ ವಿರಾಮದ ಬಳಿಕ ತೈಲ ಬೆಲೆ ಇಳಿಕೆಯಾಗಿದ್ದು, ಲೋಹಗಳ ಮೇಲಿನ ಹೂಡಿಕೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಚೀನಾ ಸೆಂಟ್ರಲ್ ಬ್ಯಾಂಕ್: ಚೀನಾ ದೇಶದ ಸೆಂಟ್ರಲ್ ಬ್ಯಾಂಕ್ ಸತತವಾಗಿ ಚಿನ್ನವನ್ನು ಖರೀದಿ ಮಾಡುತ್ತಿರುವುದು ಕೂಡ ಜಾಗತಿಕವಾಗಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಬಹಳ ದಿನಗಳ ನಂತರ ಚಿನ್ನ ಮತ್ತು ಬೆಳ್ಳಿ ಎರಡೂ ಏಕಕಾಲಕ್ಕೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಆತಂಕ ತಂದಿದೆ.
ಬೆಳ್ಳಿ ದರ (Silver Rate):
ಬೆಳ್ಳಿ ಬೆಲೆಯಲ್ಲೂ ಭಾರಿ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್‌ಗೆ 10 ರೂ.ನಷ್ಟು ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಇಂದು 100 ಗ್ರಾಂ ಬೆಳ್ಳಿಯ ಬೆಲೆ 26,000 ರೂಪಾಯಿ ಇದೆ. ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಇದು 26,500 ರೂಪಾಯಿಗಳವರೆಗೆ ತಲುಪಿದೆ.
24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ) – ಪ್ರಮುಖ ನಗರಗಳು
ಚೆನ್ನೈ – ₹15,491
ಮುಂಬೈ – ₹15,382
ದೆಹಲಿ – ₹15,397
ಕೋಲ್ಕತ್ತಾ – ₹15,382
ಬೆಂಗಳೂರು – ₹15,382
ಹೈದರಾಬಾದ್ – ₹15,382
ಕೇರಳ – ₹15,382
ಪುಣೆ – ₹15,382
ವಡೋದರಾ – ₹15,387
ಅಹಮದಾಬಾದ್ – ₹15,387

