HomeBusinessಒಂದೇ ದಿನ ₹3,770 ಜಿಗಿದ ಚಿನ್ನದ ಬೆಲೆ, ಬೆಳ್ಳಿಯೂ ಸಖತ್ ಕಾಸ್ಟ್ಲಿ ಬೆಂಗಳೂರಲ್ಲಿ ಜು.2ರಂದು ಗೋಲ್ಡ್‌...

ಒಂದೇ ದಿನ ₹3,770 ಜಿಗಿದ ಚಿನ್ನದ ಬೆಲೆ, ಬೆಳ್ಳಿಯೂ ಸಖತ್ ಕಾಸ್ಟ್ಲಿ ಬೆಂಗಳೂರಲ್ಲಿ ಜು.2ರಂದು ಗೋಲ್ಡ್‌ ರೇಟ್‌ ಎಷ್ಟು?

ಬೆಂಗಳೂರು: ಕಳೆದ ಜೂನ್ ತಿಂಗಳಲ್ಲಿ ಸತತ ಇಳಿಕೆ ಕಂಡು ಗ್ರಾಹಕರಿಗೆ ನಿರಾಳತೆ ತಂದಿದ್ದ ಚಿನ್ನದ ಬೆಲೆ, ಜುಲೈ ಆರಂಭದಲ್ಲೇ ರಾಕೆಟ್ ವೇಗದಲ್ಲಿ ಏರಿ ಬಿಗ್ ಶಾಕ್ ನೀಡಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಗುರುವಾರ (ಜುಲೈ 2, 2026) ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಜಿಗಿತ ಕಂಡಿವೆ.

ಅಮೆರಿಕದ ಹಣದುಬ್ಬರ ಪ್ರಮಾಣ, ಫೆಡರಲ್ ರಿಸರ್ವ್‌ನ ಬಡ್ಡಿ ದರಗಳ ಮೇಲಿನ ಅನಿಶ್ಚಿತತೆ ಹಾಗೂ ಪಶ್ಚಿಮ ಏಷ್ಯಾದ ಜಾಗತಿಕ ವಿದ್ಯಮಾನಗಳು ಈ ದಿಢೀರ್ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ. ಮುಂಬರುವ ಸೆಪ್ಟೆಂಬರ್ ತಿಂಗಳಿನಿಂದ ದೇಶದಲ್ಲಿ ಹಬ್ಬಗಳ ಸೀಸನ್ ಆರಂಭವಾಗಲಿದ್ದು, ಬೇಡಿಕೆ ಮತ್ತಷ್ಟು ಹೆಚ್ಚಾಗಿ ಚಿನ್ನದ ಬೆಲೆ ಇನ್ನುಳಿದ ದಿನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಬೆಂಗಳೂರಲ್ಲಿ ಇಂದಿನ ಚಿನ್ನದ ದರ

ಇಂದು ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನದ ದರಗಳು ಹೀಗಿವೆ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ):

ಪ್ರತಿ 1 ಗ್ರಾಂಗೆ ₹377 ಏರಿಕೆ ಕಂಡು, ಪ್ರಸ್ತುತ ₹14,455 ತಲುಪಿದೆ.

ಪ್ರತಿ 10 ಗ್ರಾಂಗೆ ₹3,770 ಏರಿಕೆಯೊಂದಿಗೆ ಬರೋಬ್ಬರಿ ₹1,44,550 ಕ್ಕೆ ತಲುಪಿದೆ.

22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ):

ಪ್ರತಿ 1 ಗ್ರಾಂಗೆ ₹345 ಏರಿಕೆಯಾಗಿ ₹13,250 ದಾಖಲಾಗಿದೆ.

ಪ್ರತಿ 10 ಗ್ರಾಂಗೆ ₹3,450 ಭಾರಿ ಏರಿಕೆಯೊಂದಿಗೆ ₹1,32,500 ರಲ್ಲಿ ಮಾರಾಟವಾಗುತ್ತಿದೆ.

ಸತತ 2ನೇ ದಿನವೂ ಬೆಳ್ಳಿ ದರ ರಾಕೆಟ್ ರೇಸ್

ಚಿನ್ನದ ಬೆಲೆಯ ಜೊತೆಜೊತೆಗೇ ಬೆಳ್ಳಿ ದರವೂ ಗ್ರಾಹಕರ ಜೇಬಿಗೆ ಭಾರಿ ಕತ್ತರಿ ಹಾಕುತ್ತಿದೆ. ಸತತ ಎರಡನೇ ದಿನವೂ ಬೆಳ್ಳಿ ಬೆಲೆಯಲ್ಲಿ ₹5,000 ದಷ್ಟು ಭಾರಿ ಜಿಗಿತ ಕಂಡುಬಂದಿದೆ.

ಬೆಂಗಳೂರಿನಲ್ಲಿ ಇಂದು 1 ಗ್ರಾಂ ಬೆಳ್ಳಿಯ ಬೆಲೆ ₹245 ತಲುಪಿದೆ.ಇದರೊಂದಿಗೆ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ದರ ₹2,45,000 ದಂತೆ ಮಾರಾಟವಾಗುತ್ತಿದ್ದು, ದಾಖಲೆ ಬರೆದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular