ಬೆಂಗಳೂರು: ಕಳೆದ ಒಂದು ವಾರದಿಂದ ಸತತ ಕುಸಿತ ಕಂಡು ನಿಟ್ಟುಸಿರು ಬಿಟ್ಟಿದ್ದ ಚಿನ್ನಾಭರಣ ಪ್ರಿಯರಿಗೆ ಫೆಬ್ರವರಿ ತಿಂಗಳ ಕೊನೆಯ ದಿನ ಭಾರಿ ಆಘಾತ ಎದುರಾಗಿದೆ. ವಾರಾಂತ್ಯದ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏಕಾಏಕಿ ಏರಿಕೆ ಕಂಡಿದ್ದು, ಚಿನ್ನ ಖರೀದಿಸುವವರ ಲೆಕ್ಕಾಚಾರ ಉಲ್ಟಾ ಮಾಡಿದೆ.ಇಂದು (ಫೆಬ್ರವರಿ 28, ಶನಿವಾರ) ಮಾರುಕಟ್ಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ಎರಡೂ ಬೆಲೆಗಳಲ್ಲಿ ಭಾರಿ ಜಿಗಿತ ದಾಖಲಾಗಿದೆ.
ಚಿನ್ನದ ಬೆನ್ನಲ್ಲೇ ಬೆಳ್ಳಿಯೂ ಕೂಡ ಹೂಡಿಕೆದಾರರಿಗೆ ಬಿಸಿ ಮುಟ್ಟಿಸಿದೆ. ಇಂದು ಏಕಾಏಕಿ ಬರೋಬ್ಬರಿ 3160 ರೂ ಗರಿಷ್ಠ ಬೆಲೆ ಏರಿಕೆ ದಾಖಲಾಗಿದೆ. ಬೆಳ್ಳಿ ಬೆಲೆಯಲ್ಲಿಯೂ 10 ಸಾವಿರ ಹೆಚ್ಚಳ ಕಂಡಿದೆ.
ಬೆಲೆ ಏರಿಕೆಗೆ ಕಾರಣವೇನು?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ವಾರಾಂತ್ಯದ ಹೆಚ್ಚಿನ ಬೇಡಿಕೆಯಿಂದಾಗಿ ಬೆಲೆಯಲ್ಲಿ ಈ ಹಠಾತ್ ಬದಲಾವಣೆ ಕಂಡುಬಂದಿದೆ ಎನ್ನಲಾಗುತ್ತಿದೆ. ಕಳೆದ ವಾರವಿಡೀ ಇಳಿಕೆ ಕಂಡಿದ್ದ ಬೆಲೆ, ಇಂದು ಒಂದೇ ದಿನ ಗರಿಷ್ಠ ಮಟ್ಟದ ಏರಿಕೆ ಕಾಣುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.
ಭಾರತದಲ್ಲಿ 24K ಚಿನ್ನದ ಬೆಲೆ
| ತೂಕ | ಇಂದಿನ ಬೆಲೆ (₹) | ನಿನ್ನೆ ಬೆಲೆ (₹) | ಏರಿಕೆ (₹) |
|---|---|---|---|
| 1 ಗ್ರಾಂ (24K) | 16,473 | 16,157 | 316 |
| 8 ಗ್ರಾಂ | 1,31,784 | 1,29,256 | 2,528 |
| 10 ಗ್ರಾಂ | 1,64,730 | 1,61,570 | 3,160 |
| 100 ಗ್ರಾಂ | 16,47,300 | 16,15,700 | 31,600 |
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ 24K ಚಿನ್ನದ ದರ (ಪ್ರತಿ 1 ಗ್ರಾಂಗೆ)
ಚೆನ್ನೈ: ₹16,582
ಮುಂಬೈ: ₹16,473
ದೆಹಲಿ: ₹16,488
ಕೋಲ್ಕತ್ತಾ: ₹16,473
ಬೆಂಗಳೂರು: ₹16,473
ಹೈದರಾಬಾದ್: ₹16,473
ಕೇರಳ: ₹16,473
ಪುಣೆ: ₹16,473
ವಡೋದರಾ: ₹16,478
ಅಹಮದಾಬಾದ್: ₹16,478

