HomeBusinessಚಿನ್ನದ ಬೆಲೆಯಲ್ಲಿ ₹19,100 ಹೆಚ್ಚಳ: ಕೆಜಿ ಬೆಳ್ಳಿ ಈಗ ₹2.75 ಲಕ್ಷ: ಇಲ್ಲಿದೆ ಇಂದಿನ ದರ...

ಚಿನ್ನದ ಬೆಲೆಯಲ್ಲಿ ₹19,100 ಹೆಚ್ಚಳ: ಕೆಜಿ ಬೆಳ್ಳಿ ಈಗ ₹2.75 ಲಕ್ಷ: ಇಲ್ಲಿದೆ ಇಂದಿನ ದರ ಪಟ್ಟಿ

ಬೆಂಗಳೂರು: ಆಭರಣ ಪ್ರಿಯರಿಗೆ ಶನಿವಾರದ ಬೆಳ್ಳಂಬೆಳಗ್ಗೆಯೇ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಮದುವೆ ಸೀಸನ್ ಜೋರಾಗಿರುವ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು (ಫೆಬ್ರವರಿ 21) ಚಿನ್ನದ ದರ ಗಗನಕ್ಕೇರಿದ್ದು, ಗ್ರಾಹಕರು ಜೇಬಿಗೆ ಕತ್ತರಿ ಹಾಕಿಕೊಳ್ಳುವಂತಾಗಿದೆ.

ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?
ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಮತ್ತು 24 ಕ್ಯಾರಟ್ ಎರಡೂ ಮಾದರಿಯ ಚಿನ್ನದ ಬೆಲೆ ಏರಿಕೆಯಾಗಿದೆ.

22 ಕ್ಯಾರಟ್ (ಆಭರಣ ಚಿನ್ನ): ಇಂದು 1 ಗ್ರಾಂ ಚಿನ್ನಕ್ಕೆ ₹175 ಹೆಚ್ಚಾಗಿದ್ದು, ದರ ₹14,600ಕ್ಕೆ ತಲುಪಿದೆ. 10 ಗ್ರಾಂ ಚಿನ್ನ ಖರೀದಿಸಲು ನೀವು ಈಗ ₹1,46,000 ಪಾವತಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

24 ಕ್ಯಾರಟ್ (ಅಪರಂಜಿ ಚಿನ್ನ): 1 ಗ್ರಾಂ ಚಿನ್ನಕ್ಕೆ ₹191 ಏರಿಕೆಯಾಗಿ, ಬೆಲೆ ₹15,928ಕ್ಕೆ ಬಂದು ನಿಂತಿದೆ. 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಬರೋಬ್ಬರಿ ₹1,59,280 ಆಗಿದೆ.

ಬೆಲೆ ಏರಿಕೆಗೆ ಕಾರಣವೇನು?
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಚಲನೆಗಳು, ಡಾಲರ್ ಮೌಲ್ಯದಲ್ಲಿನ ವ್ಯತ್ಯಾಸ ಹಾಗೂ ಸ್ಥಳೀಯವಾಗಿ ಮದುವೆ ಸೀಸನ್ ಇರುವುದರಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದು ನೇರವಾಗಿ ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರಿದೆ.

ಹೂಡಿಕೆದಾರರ ಗಮನಕ್ಕೆ: ಕೇವಲ ಆಭರಣ ಚಿನ್ನವಲ್ಲದೆ, 100 ಗ್ರಾಂ 24 ಕ್ಯಾರಟ್ ಚಿನ್ನದ ಮೇಲೆ ಇಂದು ಒಂದೇ ದಿನ ₹19,100 ಏರಿಕೆಯಾಗಿದೆ. ನಿನ್ನೆ ₹15,73,700 ಇದ್ದ ಬೆಲೆ ಇಂದು ₹15,92,800ಕ್ಕೆ ಏರಿದೆ.

ಬೆಳ್ಳಿಯೂ ಬಲು ದುಬಾರಿ: ಕೆಜಿ ಬೆಳ್ಳಿಗೆ ಈಗ 2.75 ಲಕ್ಷ ರೂಪಾಯಿ

ಚಿನ್ನದ ಬೆಲೆ ಏರಿಕೆಯ ಬೆನ್ನಲ್ಲೇ ಬೆಳ್ಳಿ ದರವೂ ಇಂದು ಭಾರಿ ನೆಗೆತ ಕಂಡಿದೆ. ಬೆಳ್ಳಿ ಖರೀದಿಸುವವರಿಗೂ ಇಂದು ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಬೆಂಗಳೂರಿನ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂ ಮತ್ತು ಕೆಜಿ ಬೆಳ್ಳಿಯ ದರಗಳಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಇಂದಿನ ಬೆಳ್ಳಿ ದರ ಪಟ್ಟಿ:

1 ಗ್ರಾಂ ಬೆಳ್ಳಿ: ನಿನ್ನೆಗಿಂತ ₹5 ಏರಿಕೆಯಾಗಿದ್ದು, ಇಂದು ₹275 ಕ್ಕೆ ತಲುಪಿದೆ.

10 ಗ್ರಾಂ ಬೆಳ್ಳಿ: ಇದರ ಬೆಲೆ ಈಗ ₹2,750 ಆಗಿದೆ.

1 ಕೆಜಿ ಬೆಳ್ಳಿ: ಬರೋಬ್ಬರಿ ₹2,75,000 ಕ್ಕೆ ಬಂದು ತಲುಪಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ :

ಚೆನ್ನೈ – ₹16,015

ಮುಂಬೈ – ₹15,928

ದೆಹಲಿ – ₹15,943

ಕೋಲ್ಕತ್ತಾ – ₹15,928

ಬೆಂಗಳೂರು – ₹15,928

ಹೈದರಾಬಾದ್ – ₹15,928

ಕೇರಳ – ₹15,928

ಪುಣೆ – ₹15,928

ವಡೋದರಾ – ₹15,933

ಅಹಮದಾಬಾದ್ – ₹15,933

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular