HomeBusinessಚಿನ್ನಾಭರಣ ಖರೀದಿಸುವವರಿಗೆ ಶಾಕ್: ಒಂದೇ ದಿನ 1400 ರೂ. ಏರಿಕೆಯಾದ ಚಿನ್ನ, ಬೆಳ್ಳಿ ಕೆಜಿಗೆ 3150...

ಚಿನ್ನಾಭರಣ ಖರೀದಿಸುವವರಿಗೆ ಶಾಕ್: ಒಂದೇ ದಿನ 1400 ರೂ. ಏರಿಕೆಯಾದ ಚಿನ್ನ, ಬೆಳ್ಳಿ ಕೆಜಿಗೆ 3150 ರೂ. ಹೆಚ್ಚಳ

ನವದೆಹಲಿ: ಚಿನ್ನದ ದರ 1400 ರೂಪಾಯಿ, ಬೆಳ್ಳಿ ದರ 3150 ರೂಪಾಯಿ ಏರಿಕೆಯಾಗಿದ್ದು, ಶ್ರಾವಣಮಾಸ ಹಬ್ಬದದ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.

ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ಚಿನಿವಾರಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ದರ 1400 ರೂ. ಏರಿಕೆಯಾಗಿದ್ದು, 74,150 ರೂಪಾಯಿಗೆ ಮಾರಾಟವಾಗಿದೆ.

ಬೆಳ್ಳಿ ದರ ಕೆಜಿಗೆ 3150 ರೂ. ಹೆಚ್ಚಳವಾಗಿದ್ದು, 87,150 ರೂಪಾಯಿಗೆ ಮಾರಾಟವಾಗಿದೆ. ಜುಲೈ 23 ರಂದು ಚಿನ್ನದ ದರ 10 ಗ್ರಾಂ ಗೆ 3350 ರೂಪಾಯಿ ಕಡಿಮೆಯಾಗಿತ್ತು. ಕೇಂದ್ರ ಬಜೆಟ್ ನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲಿನ ಮೂಲ ಕಸ್ಟಮ್ಸ್ ಸುಂಕ ಕಡಿತಗೊಳಿಸಲಾಗಿದೆ. ಕಳೆದ ತಿಂಗಳಿಂದ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಇವತ್ತು ಒಂದೇ ದಿನ 1400 ರೂ. ಏರಿಕೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular