ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಾ ಆಭರಣ ಪ್ರಿಯರಲ್ಲಿ ತೀವ್ರ ಆತಂಕ ಮೂಡಿಸಿದ್ದ ಚಿನ್ನದ ದರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ ಜಾಗತಿಕ ಮಾರುಕಟ್ಟೆ ಹಾಗೂ ದೇಶೀಯ ಮಾರುಕಟ್ಟೆಗಳಲ್ಲಿ ಇಂದಿನ ಶುಕ್ರವಾರದ ವಹಿವಾಟಿನಲ್ಲಿ ಬಂಗಾರದ ಬೆಲೆ ಏಕಾಏಕಿ ಭಾರಿ ಪ್ರಮಾಣದಲ್ಲಿ ತಗ್ಗಿದ್ದು, ಸದ್ಯದಲ್ಲೇ ಮತ್ತಷ್ಟು ಇಳಿಕೆಯಾಗುವ ಸ್ಪಷ್ಟ ಸೂಚನೆಗಳು ಕಂಡುಬರುತ್ತಿವೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಜಿಗಿತ ಕಂಡಿರುವುದೇ ಹೂಡಿಕೆದಾರರು ಚಿನ್ನದಿಂದ ಕೈಹಿಂತೆಗೆದುಕೊಳ್ಳಲು ಮತ್ತು ಬಂಗಾರ ತನ್ನ ಆಕರ್ಷಣೆ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ (ಜುಲೈ 24):
ಸತತ 4 ದಿನಗಳ ಕಾಲ (ಕ್ರಮವಾಗಿ ₹2,100, ₹700, ₹150 ಮತ್ತು ₹700) ಏರಿಕೆಯಾಗಿದ್ದ ಅಪರಂಜಿ ದರಕ್ಕೆ ಇಂದು ಬ್ರೇಕ್ ಬಿದ್ದಿದೆ.
24 ಕ್ಯಾರೆಟ್ ಅಪರಂಜಿ ಚಿನ್ನ: ಇಂದು ಶುಕ್ರವಾರ 10 ಗ್ರಾಂಗೆ ಭಾರಿ ₹1,850 ಇಳಿಕೆಯಾಗಿದ್ದು, ₹1,44,330 ದರದಲ್ಲಿ ವಹಿವಾಟು ನಡೆಸುತ್ತಿದೆ. (ಪ್ರತಿ ಗ್ರಾಂಗೆ ₹14,433)
22 ಕ್ಯಾರೆಟ್ ಆಭರಣ ಚಿನ್ನ: 10 ಗ್ರಾಂಗೆ ₹1,700 ಇಳಿಕೆಯಾಗಿದ್ದು, ₹1,32,300 ತಲುಪಿದೆ. (ಪ್ರತಿ ಗ್ರಾಂಗೆ ₹13,230)
18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹10,825 ರಂತೆ ಮಾರಾಟವಾಗುತ್ತಿದೆ
ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ: ಕೆಜಿಗೆ ₹5,000 ಕಡಿತ
ಬಂಗಾರದ ದರ ಇಳಿಕೆಯೊಂದಿಗೆ ಬೆಳ್ಳಿ ಬೆಲೆಯೂ ಭರ್ಜರಿ ಕುಸಿತ ಕಂಡಿದೆ. ಇಂದು ಶುಕ್ರವಾರದ ವಹಿವಾಟಿನಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ₹5,000 ರಷ್ಟು ಭಾರಿ ಇಳಿಕೆಯಾಗಿದ್ದು, ಪ್ರಸ್ತುತ ₹2.35 ಲಕ್ಷದಲ್ಲಿ ವಹಿವಾಟು ನಡೆಸುತ್ತಿದೆ.
ಬೆಳ್ಳಿ ದರ (1 ಗ್ರಾಂ): ₹235
ಬೆಳ್ಳಿ ದರ (100 ಗ್ರಾಂ): ₹23,500
(ಬೆಂಗಳೂರಿನಲ್ಲಿ 100 ಗ್ರಾಂ ಬೆಳ್ಳಿಗೆ ₹23,500 ದರವಿದ್ದರೆ, ತಮಿಳುನಾಡು, ಕೇರಳ ಸೇರಿದಂತೆ ನೆರೆ ರಾಜ್ಯಗಳಲ್ಲಿ 100 ಗ್ರಾಂ ಬೆಳ್ಳಿ ಬೆಲೆ ಸುಮಾರು ₹24,000 ರಷ್ಟಿದೆ).
ಅಂತಾರಾಷ್ಟ್ರೀಯ ಮಾರುಕಟ್ಟೆಯ ಇಂದಿನ ಸ್ಥಿತಿಗತಿ:
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜಾಗತಿಕ ವಿದ್ಯಮಾನಗಳ ಪರಿಣಾಮ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಕುಸಿತ ದಾಖಲಾಗಿದೆ:
ಸ್ಪಾಟ್ ಗೋಲ್ಡ್ (Gold Spot): ಪ್ರತಿ ఔನ್ಸ್‌ಗೆ $4,150 ಮಟ್ಟದಲ್ಲಿದ್ದುದ್ದು ಶುಕ್ರವಾರ ಬೆಳಿಗ್ಗೆ ಏಕಾಏಕಿ $4,040 ಕ್ಕೆ ಕುಸಿದಿದೆ.
ಸ್ಪಾಟ್ ಸಿಲ್ವರ್ (Silver Spot): ಬೆಳ್ಳಿ ದರವೂ ಸಹ ಪ್ರತಿ ఔನ್ಸ್‌ಗೆ $60 ರ ಮಟ್ಟದಿಂದ ಭಾರಿ ಜಸಿತ ಕಂಡು $58 ಕ್ಕಿಂತ ಕೆಳಗೆ ಜಾರಿದೆ.
ಮಾರುಕಟ್ಟೆಯಲ್ಲಿ ನಿರಂತರ ಏರಿಕೆಯಿಂದ ಕಂಗಾಲಾಗಿದ್ದ ಮಧ್ಯಮ ವರ್ಗದ ಗ್ರಾಹಕರಿಗೆ ಮತ್ತು ಮದುವೆ ಸೀಸನ್‌ಗಾಗಿ ಆಭರಣ ಖರೀದಿಸಲು ಕಾಯುತ್ತಿದ್ದ ಕುಟುಂಬಗಳಿಗೆ ಈ ದಿಢೀರ್ ದರ ಇಳಿಕೆ ದೊಡ್ಡ ಸಮಾಧಾನ ತಂದಿದೆ.

