ಬೆಂಗಳೂರಿನ ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ಇಂದು ಸಿಹಿ ಸುದ್ದಿ ಕಳೆದ ನಾಲ್ಕೈದು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಚಿನ್ನದ ದರ, ಇಂದು ಕೂಡಾ ಭಾರಿ ಕುಸಿತ ಕಂಡಿದೆ. ಅಮೆರಿಕಾ-ಇರಾನ್ ಸಂಘರ್ಷದಂತಹ ಜಾಗತಿಕ ವಿದ್ಯಮಾನಗಳ ನಡುವೆಯೂ ಡಾಲರ್ ಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ, ಸ್ಥಳೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತಣ್ಣಗಾಗಿದೆ.ಇಂದು ಪ್ರತಿ 10 ಗ್ರಾಂ ಚಿನ್ನದ ಮೇಲೆ ಸುಮಾರು 980 ರೂಪಾಯಿ ಇಳಿಕೆಯಾಗಿದ್ದು, ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ.
ಬೆಲೆ ಇಳಿಕೆಗೆ ಕಾರಣವೇನು?
ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯ ಬಲಗೊಳ್ಳುತ್ತಿರುವುದು ಚಿನ್ನದ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಎಮ್‌ಸಿಎಕ್ಸ್ (MCX) ಮಾರುಕಟ್ಟೆಯಲ್ಲಿನ ಏರಿಳಿತಗಳು ಕೂಡಾ ಬೆಲೆ ಕುಸಿತಕ್ಕೆ ಸಾಥ್ ನೀಡಿವೆ. ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಲಾಭದಾಯಕವಾಗಿ ಪರಿಗಣಿಸುತ್ತಿದ್ದರೂ, ಸದ್ಯದ ಇಳಿಕೆ ಹಾದಿ ಆಭರಣ ಖರೀದಿದಾರರಿಗೆ ವರದಾನವಾಗಿದೆ.
ಬೆಳ್ಳಿ ಬೆಲೆ
ಚಿನ್ನದ ಬೆಲೆ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ. ಬುಧವಾರದ ಬೆಲೆಯೇ ಇಂದೂ ಮುಂದುವರಿದಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹ 2,85,000 ದಾಖಲಾಗಿದೆ.ಬೆಳ್ಳಿ ಮೌಲ್ಯದಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಇಲ್ಲ.
24 ಕ್ಯಾರೆಟ್ ಚಿನ್ನದ ದರ (ಶುದ್ಧ ಚಿನ್ನ):
1 ಗ್ರಾಂ: ₹16,353 (ನಿನ್ನೆಗಿಂತ ₹98 ಇಳಿಕೆ)
10 ಗ್ರಾಂ: ₹1,63,530 (ನಿನ್ನೆಗಿಂತ ₹980 ಇಳಿಕೆ)
100 ಗ್ರಾಂ: ₹16,35,300 (ನಿನ್ನೆಗಿಂತ ₹9,800 ಇಳಿಕೆ)
ಕಳೆದ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತಿದೆ.ಅಮೆರಿಕಾ-ಇರಾನ್ ಸಂಘರ್ಷದ ನಡುವೆಯೂ ಡಾಲರ್ ಮೌಲ್ಯ ಹೆಚ್ಚಾದ ಕಾರಣ ಈ ಬೆಲೆ ಇಳಿಕೆಯಾಗಿದೆ.ಮದುವೆ ಅಥವಾ ಹೂಡಿಕೆಗಾಗಿ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಉತ್ತಮ ಸಮಯ.
ಭಾರತದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ (1 ಗ್ರಾಂ)
ಚೆನ್ನೈ: ₹16,495
ದೆಹಲಿ: ₹16,368
ವಡೋದರಾ: ₹16,358
ಅಹಮದಾಬಾದ್: ₹16,358
ಬೆಂಗಳೂರು: ₹16,353
ಮುಂಬೈ: ₹16,353
ಕೋಲ್ಕತ್ತಾ: ₹16,353
ಹೈದರಾಬಾದ್: ₹16,353
ಕೇರಳ: ₹16,353
ಪುಣೆ: ₹16,353

