HomeLatest News2026ರಲ್ಲಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಮುರಿಯುತ್ತಾ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯ?

2026ರಲ್ಲಿ ಚಿನ್ನದ ದರ ಸಾರ್ವಕಾಲಿಕ ದಾಖಲೆ ಮುರಿಯುತ್ತಾ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯ?

ಆರ್ಥಿಕ ಅಸ್ಥಿರತೆಯ ನಡುವೆಯೂ ಭಾರತೀಯರ ಭರವಸೆಯ ಹೂಡಿಕೆಯಾಗಿರುವ ಚಿನ್ನ, ಈಗ ಹೊಸ ದಾಖಲೆಗಳತ್ತ ಮುಖ ಮಾಡಿದೆ. ಇತ್ತೀಚೆಗಷ್ಟೇ ಹತ್ತು ಗ್ರಾಂಗೆ ₹1 ಲಕ್ಷ ದಾಟಿ ಅಚ್ಚರಿ ಮೂಡಿಸಿದ್ದ ಹಳದಿ ಲೋಹ, 2026ರ ವೇಳೆಗೆ ಊಹೆಗೂ ನಿಲುಕದ ಮಟ್ಟಕ್ಕೆ ಜಿಗಿಯಲಿದೆ ಎಂಬ ವಿಶ್ಲೇಷಣೆಗಳು ಹೂಡಿಕೆದಾರರಲ್ಲಿ ಹೊಸ ಸಂಚಲನ ಮೂಡಿಸಿವೆ

ಜಗತ್ತಿನ ಪ್ರಮುಖ ಘಟನೆಗಳನ್ನು ಮೊದಲೇ ಹೇಳಿ ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಖ್ಯಾತಿ ಪಡೆದಿರುವ ಅತೀಂದ್ರಿಯ ಶಕ್ತಿ ಬಾಬಾ ವಂಗಾ, ಈಗ ಚಿನ್ನದ ಬೆಲೆಯ ಬಗ್ಗೆ ನೀಡಿರುವ ಭವಿಷ್ಯವಾಣಿ ಇಡೀ ಆರ್ಥಿಕ ಲೋಕವನ್ನೇ ಬೆಚ್ಚಿಬೀಳಿಸಿದೆ.

ಹಣದ ಮೌಲ್ಯ ಶೂನ್ಯ, ಚಿನ್ನವೇ ಆಸರೆ: ಏನಿದು ಕ್ಯಾಶ್-ಕ್ರಶ್?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಬಾ ವಂಗಾ ಅವರ ಮುನ್ಸೂಚನೆಯಂತೆ 2026ರಲ್ಲಿ ಜಗತ್ತು ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ. ಆ ಸಮಯದಲ್ಲಿ ಹಣದ (Cash) ಮೌಲ್ಯ ಕುಸಿದು, ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆ ಬುಡಮೇಲಾಗಲಿದೆ. ಇಂತಹ ಸಂದರ್ಭದಲ್ಲಿ ಜನರು ಸುರಕ್ಷಿತ ಹೂಡಿಕೆಯಾಗಿ ಚಿನ್ನ ಮತ್ತು ಬೆಳ್ಳಿಯ ಮೊರೆ ಹೋಗಲಿದ್ದಾರೆ. ಈ ಭಾರಿ ಬೇಡಿಕೆಯಿಂದಾಗಿ ಚಿನ್ನದ ಬೆಲೆ ಸದ್ಯದ ದರಕ್ಕಿಂತ 25% ರಿಂದ 40% ರಷ್ಟು ಹೆಚ್ಚಾಗಲಿದೆ ಎಂಬುದು ಇವರ ವಾದ.

2026ರ ದೀಪಾವಳಿಗೆ ಚಿನ್ನದ ಬೆಲೆ ಎಷ್ಟಾಗಬಹುದು?

ಮಾರುಕಟ್ಟೆ ತಜ್ಞರು ಮತ್ತು ಈ ಭವಿಷ್ಯವಾಣಿಯನ್ನು ಆಧರಿಸಿ ಲೆಕ್ಕಾಚಾರ ಹಾಕಿದರೆ 2026ರ ಹೊತ್ತಿಗೆ ಹಳದಿ ಲೋಹದ ಬೆಲೆ ಊಹೆಗೂ ನಿಲುಕದ ಮಟ್ಟಕ್ಕೆ ತಲುಪಬಹುದು:

ಅಂದಾಜು ಬೆಲೆ: 10 ಗ್ರಾಂ ಶುದ್ಧ ಚಿನ್ನದ ಬೆಲೆ ₹1,62,500 ರಿಂದ ₹1,82,000 ವರೆಗೆ ಜಿಗಿಯಬಹುದು.ಇಂದು ಯಾರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದಾರೋ ಅವರು 2026ರ ವೇಳೆಗೆ ಕೋಟ್ಯಧಿಪತಿಗಳಾಗುವುದರಲ್ಲಿ ಸಂಶಯವಿಲ್ಲ ಎಂಬ ಚರ್ಚೆ ಈಗ ಶುರುವಾಗಿದೆ.

ಬಾಬಾ ವಂಗಾ ಕೇವಲ ಬೆಲೆ ಏರಿಕೆಯ ಬಗ್ಗೆ ಮಾತ್ರವಲ್ಲದೆ 2026ರ ವೇಳೆಗೆ ಜಗತ್ತಿನಲ್ಲಿ ಸುನಾಮಿ ಭೂಕಂಪದಂತಹ ದೊಡ್ಡ ಮಟ್ಟದ ನೈಸರ್ಗಿಕ ವಿಕೋಪಗಳು ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ ಮನುಷ್ಯರು ಬಾಹ್ಯಾಕಾಶ ಜೀವಿಗಳೊಂದಿಗೆ (Aliens) ಸಂಪರ್ಕ ಹೊಂದಲಿದ್ದಾರೆ ಎಂಬ ವಿಚಿತ್ರ ಮುನ್ಸೂಚನೆಯನ್ನೂ ನೀಡಿದ್ದಾರೆ

ಬೆಲೆ ಏರಿಕೆಯ ಹಿಂದೆ ಭವಿಷ್ಯವಾಣಿ ಮಾತ್ರವಲ್ಲ ಬಲವಾದ ಆರ್ಥಿಕ ಕಾರಣಗಳೂ ಇವೆ

ಬಾಬಾ ವಂಗಾ ಅವರ ಭವಿಷ್ಯವಾಣಿಯ ಜೊತೆಗೆ ಇಂದಿನ ಜಾಗತಿಕ ಮಾರುಕಟ್ಟೆಯ ಅಂಕಿಅಂಶಗಳೂ ಕೂಡ ಚಿನ್ನದ ಬೆಲೆ ಏರಿಕೆಗೆ ಪೂರಕವಾಗಿ ನಿಂತಿವೆ. ಪ್ರಮುಖವಾಗಿ ಮೂರು ಅಂಶಗಳು ಈ ಸಂಚಲನಕ್ಕೆ ಕಾರಣವಾಗಿವೆ

ಜಾಗತಿಕ ಹಣದುಬ್ಬರದ ಬಿಸಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಹಣದ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹಣದುಬ್ಬರ ಏರಿಕೆಯಾದಂತೆಲ್ಲಾ ಕರೆನ್ಸಿಯ ಮೇಲಿನ ನಂಬಿಕೆ ಕಡಿಮೆಯಾಗಿ ಜನರು ತಮ್ಮ ಹಣದ ಮೌಲ್ಯವನ್ನು ಉಳಿಸಿಕೊಳ್ಳಲು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ರಾಷ್ಟ್ರಗಳ ನಡುವಿನ ಸಮರ ಭೀತಿ: ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ರಾಷ್ಟ್ರಗಳ ನಡುವಿನ ವ್ಯಾಪಾರ ಸಮರಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿವೆ. ಇಂತಹ ಅನಿಶ್ಚಿತತೆಯ ಸಮಯದಲ್ಲಿ ಷೇರು ಮಾರುಕಟ್ಟೆಗಿಂತ ಸುರಕ್ಷಿತವಾಗಿರುವ ಚಿನ್ನವೇ ಹೂಡಿಕೆದಾರರ ಮೊದಲ ಆಯ್ಕೆಯಾಗಿದೆ.

ಸಂಕಷ್ಟದ ಸಮಯದ ಆಪದ್ಬಾಂಧವ: ಮಾರುಕಟ್ಟೆಗಳು ಕುಸಿದಾಗ ಅಥವಾ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಏರುಪೇರಾದಾಗ ಚಿನ್ನವು ಯಾವಾಗಲೂ ಅತ್ಯುತ್ತಮ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ದೀರ್ಘಕಾಲದ ಲಾಭದ ದೃಷ್ಟಿಯಿಂದ ನೋಡುವುದಾದರೆ ಚಿನ್ನವು ಎಂದಿಗೂ ತನ್ನ ಮೌಲ್ಯವನ್ನು ಕಳೆದುಕೊಳ್ಳದ ಏಕೈಕ ಆಸ್ತಿಯಾಗಿ ಹೊರಹೊಮ್ಮಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular