HomeKarnatakaBIG NEWS: ಜಮೀನು ಪರಬಾರೆ ಆರೋಪ: ತಹಶಿಲ್ದಾರ್ ವಿರುದ್ಧ್ FIR ದಾಖಲು

BIG NEWS: ಜಮೀನು ಪರಬಾರೆ ಆರೋಪ: ತಹಶಿಲ್ದಾರ್ ವಿರುದ್ಧ್ FIR ದಾಖಲು

ಬೆಳಗಾವಿ: ಜಮೀನು ಅಕ್ರಮವಾಗಿ ಬೇರೆಯವರಿಗೆ ಪರಬಾರೆ ಮಾಡಿದ ಆರೋಪದಲ್ಲಿ ಗೋಕಾಕ್ ತಹಶಿಲ್ದಾಅರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ತಹಶಿಲ್ದಾರ್ ಮೋಹನ ಭಸ್ಮೆ ವಿರುದ್ಧ ಗೋಗಾಕ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಮಮದಾಪುರ ಗ್ರಾಮದ ಸಂಗೀತ್ ಬನ್ನೂರ್ ಎನ್ನುವವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ 20 ಗುಂಟೆ ಜಮೀನನ್ನು ಗುಲಾಬ್ ಒಸ್ವಾಲ್ ಎಂಬಾತನಿಗೆ ಪರಬಾರೆ ಮಾಡಿಕೊಟ್ಟ ಆರೋಪ ತಹಶಿಲ್ದಾರ್ ವಿರುದ್ಧ ಕೇಳಿಬಂದಿದೆ.

ಗುಲಾಬ್ ಒಸ್ವಾಲ್ ಆಮಿಷಕ್ಕೆ ಒಳಗಾಗಿ ತಹಶೀಲ್ದಾರ್ ಆತನ ಹೆಸರಿಗೆ ಭೂಮಿ ಪರಬಾರೆ ಮಾಡಿದ್ದಾರೆ. ಇದಕ್ಕೆ ಇತರ ಅಧಿಕಾರಿಗಳು ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮೋಹನ್ ಭಸ್ಮೆ, ಕಂದಾಯ ನಿರೀಕ್ಷಕ ಎಸ್.ಎಂ..ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ತುಕಾರಾಂ, ಲ್ಯಾಂಡ್ ಸರ್ವೇಯರ್ ತಿಮ್ಮಯ್ಯ ಹಾಗೂ ಗುಲಾಲ್ ಒಸ್ವಾಲ್ ವಿರುದ್ಧ ಗೋಕಾಕ್ ಠಾಣೆಯಲ್ಲಿ ಪ್ರಕರಣ ದಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular