HomeLifestyleಗೋವಾ ಪ್ರವಾಸದಲ್ಲಿ ಜವರಾಯನ ದರ್ಶನ: ಪ್ಯಾರಾಸೈಲಿಂಗ್ ಮಾಡುವಾಗಲೇ ಕಟ್ ಆಯ್ತು ಹಗ್ಗ, ಪ್ರವಾಸಿಗನ ಸ್ಥಿತಿ ಏನಾಯ್ತು?

ಗೋವಾ ಪ್ರವಾಸದಲ್ಲಿ ಜವರಾಯನ ದರ್ಶನ: ಪ್ಯಾರಾಸೈಲಿಂಗ್ ಮಾಡುವಾಗಲೇ ಕಟ್ ಆಯ್ತು ಹಗ್ಗ, ಪ್ರವಾಸಿಗನ ಸ್ಥಿತಿ ಏನಾಯ್ತು?

ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುವ ಗೋವಾದಿಂದ ಈಗ ಒಂದು ಆಘಾತಕಾರಿ ವಿಡಿಯೋ ಹೊರಬಂದಿದೆ. ಸಮುದ್ರದ ಮಧ್ಯೆ ಪ್ಯಾರಾಸೈಲಿಂಗ್ ಸಾಹಸ ಕ್ರೀಡೆಯಲ್ಲಿ ತೊಡಗಿದ್ದ ಪ್ರವಾಸಿಗನೊಬ್ಬ ಆಕಾಶದಲ್ಲಿ ತೇಲುತ್ತಿರುವಾಗಲೇ ಹಗ್ಗ ಹರಿದು ಹೋಗಿರುವ ಘಟನೆ ನಡೆದಿದೆ. ಈ ಮೈ ಜುಂ ಎನಿಸುವ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲೇನಿದೆ? ವೈರಲ್ ಆಗಿರುವ ವಿಡಿಯೋದಲ್ಲಿ, ಪ್ರವಾಸಿಗ ಪ್ಯಾರಾಚೂಟ್ ಮೂಲಕ ಆಕಾಶದಲ್ಲಿ ಎತ್ತರಕ್ಕೆ ಹಾರುತ್ತಿರುವುದನ್ನು ಕಾಣಬಹುದು. ಆದರೆ ಇದ್ದಕ್ಕಿದ್ದಂತೆ ಬೋಟ್ ಮತ್ತು ಪ್ಯಾರಾಚೂಟ್ ಅನ್ನು ಜೋಡಿಸಿದ್ದ ಕೇಬಲ್ ಕಟ್ ಆಗಿದೆ. ಇದನ್ನು ಕಂಡು ಬೋಟ್‌ನಲ್ಲಿದ್ದ ಇತರ ಪ್ರವಾಸಿಗರು ಕಿರುಚಾಡುತ್ತಾ ಗಾಬರಿಗೊಂಡಿದ್ದಾರೆ. ಈ ವೇಳೆ ಬೋಟ್ ಸಿಬ್ಬಂದಿಯು ಜನರು ಗಾಬರಿಗೊಳ್ಳದಂತೆ ಸಮಾಧಾನಪಡಿಸುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ. ಕೇವಲ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸುಮಾರು 86 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ನೆಟ್ಟಿಗರ ಆತಂಕ ಮತ್ತು ಪ್ರತಿಕ್ರಿಯೆ ಈ ಘಟನೆಯ ವಿಡಿಯೋ ಎಕ್ಸ್ (ಟ್ವಿಟರ್) ತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕರು ಇಂತಹ ಸಾಹಸ ಕ್ರೀಡೆಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. “ನಾನು ಅನೇಕ ಬಾರಿ ಪ್ಯಾರಾಸೈಲಿಂಗ್ ಮಾಡಿದ್ದೇನೆ, ಆದರೆ ಇತ್ತೀಚೆಗೆ ಇಂತಹ ಘಟನೆಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಆತಂಕಕಾರಿ,” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ನಮಗೂ ಥೈಲ್ಯಾಂಡ್‌ನ ಫುಕೆಟ್‌ನಲ್ಲಿ ಇಂತಹದ್ದೇ ಅನುಭವವಾಗಿತ್ತು,” ಎಂದು ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚಿನ ದಿನಗಳಲ್ಲಿ ಪ್ರವಾಸಿ ತಾಣಗಳಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅದೃಷ್ಟವಶಾತ್ ಪ್ರವಾಸಿಗನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular