ಕರ್ನಾಟಕದ ಕಾಂಗ್ರೆಸ್ ಸರ್ಕಾರ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು ‘ಗೃಹಜ್ಯೋತಿ’. ಈ ಯೋಜನೆಯಿಂದ ವಿದ್ಯುತ್ ಸರಬರಾಜು ಕಂಪನಿಗಳು ‘ಎಸ್ಕಾಂ’ಗಳಿಗೆ ಎಷ್ಟು ನಷ್ಟವಾಗುತ್ತಿದೆ? ಎಂಬುದು ಸದಾ ಚರ್ಚೆಯ ವಿಚಾರವಾಗಿದೆ.
ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡಬೇಕು ಎಂಬ ಸದುದ್ದೇಶದಿಂದ ಜಾರಿಯಾದ ‘ಗೃಹಜ್ಯೋತಿ’ ಯೋಜನೆಯು ಕಾಂಗ್ರೆಸ್ ಸರ್ಕಾರದ ಕ್ರಾಂತಿಕಾರಕ ಹೆಜ್ಜೆಗಳಲ್ಲಿ ಒಂದು.
2026-27ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಗೃಹಜ್ಯೋತಿ’ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ರೂ.10,578 ಕೋಟಿ ಮೀಸಲು ಇರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.
ಗೃಹಜ್ಯೋತಿ ಫಲಾನುಭವಿಗಳು ಎಷ್ಟು?: ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ‘ಗೃಹಜ್ಯೋತಿ’ ಯೋಜನೆ ಫಲಾನುಭವಿಗಳು ಎಷ್ಟು?.
‘ಗೃಹಜ್ಯೋತಿ’ ಯೋಜನೆಯಡಿ 2023ರ ಆಗಸ್ಟ್‌ನಿಂದ ಫೆಬ್ರವರಿ 2026ರ ತನಕ ಫಲಾನುಭವಿಗಳ ಸಂಖ್ಯೆಯನ್ನು ಎಸ್ಕಾಂಗಳು ನೀಡಿವೆ. ರಾಜ್ಯದ ಒಟ್ಟು ‘ಗೃಹಜ್ಯೋತಿ’ ಯೋಜನೆ ಫಲಾನುಭವಿಗಳ ಸಂಖ್ಯೆ 1,66,75,123 ಆಗಿದೆ.
ಎಸ್ಕಾಂಗಳ ವಾರು ‘ಗೃಹಜ್ಯೋತಿ’ ಫಲಾನುಭವಿಗಳು
- ಬೆಸ್ಕಾಂ – 69,98,549
- ಮೆಸ್ಕಾಂ – 15,89,987
- ಹೆಸ್ಕಾಂ – 35,27,512
- ಗುವಿಕಂ – 21,93,782
- ಚಾವಿಸಕಂ – 23,65,293

