HomeLatest Newsನಿಮ್ಮ ಕರ್ಮಕಾಂಡವನ್ನು ನೀವೇ ನೋಡಿಕೊಳ್ಳಿ: ಮೂತ್ರ ವಿಸರ್ಜನೆ ತಪ್ಪಿಸಲು ಕಾಂಪೌಂಡ್‌ಗಳಿಗೆ ಕನ್ನಡಿ ಅಳವಡಿಸಿದ ಮೈಸೂರು ಪಾಲಿಕೆ!

ನಿಮ್ಮ ಕರ್ಮಕಾಂಡವನ್ನು ನೀವೇ ನೋಡಿಕೊಳ್ಳಿ: ಮೂತ್ರ ವಿಸರ್ಜನೆ ತಪ್ಪಿಸಲು ಕಾಂಪೌಂಡ್‌ಗಳಿಗೆ ಕನ್ನಡಿ ಅಳವಡಿಸಿದ ಮೈಸೂರು ಪಾಲಿಕೆ!

ಮೈಸೂರು.. ರಾಜ್ಯದ ಅತಿಹೆಚ್ಚು ಸ್ವಚ್ಛತೆಯಿಂದ ಕೂಡಿರುವ ನಗರ ಎಂದೇ ಖ್ಯಾತಿಯನ್ನು ಪಡೆದ ನಗರ. ಮೈಸೂರು ಎಂದರೆ ಸ್ವಚ್ಛತೆ, ಸ್ವಚ್ಛತೆ ಎಂದರೆ ಮೈಸೂರು ಎಂದು ಸ್ಥಳೀಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಆದರೆ ಇದು ಎಷ್ಟು ಸತ್ಯ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿಬಿಡುತ್ತದೆ ನಗರದ ಸಬ್ ಅರ್ಬನ್ ಬಸ್ ಸ್ಟ್ಯಾಂಡ್ ಸುತ್ತಲಿನ ವಾತಾವರಣ. ಹೌದು, ಈ ಬಸ್ ಸ್ಟಾಂಡ್ ಎದುರಿಗಿನ ಕಾಂಪೌಂಡ್‌ಗಳಲ್ಲಿ ಮೂತ್ರ ವಿಸರ್ಜನೆ ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಮಲಬಾರ್ ಅಂಗಡಿ ಎದುರಿಗಿನ ಕಾಂಪೌಂಡ್ ಇರುವುದು ಇದೇ ಕೆಲಸಕ್ಕೆ ಎಂಬಂತಿದೆ ಪರಿಸ್ಥಿತಿ.

ಇನ್ನು ಹಾರ್ಡಿಂಜ್ ಸರ್ಕಲ್‌ನಿಂದ ಬಸ್‌ ನಿಲ್ದಾಣದ ಕಡೆಗೆ ಬರುವ ಫುಟ್‌ಪಾತ್ ಪಾದಾಚಾರಿಗಳಿಗಿಂತ ವ್ಯಾಪಾರಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಇದನ್ನು ಪ್ರಶ್ನಿಸುವ ಕೆಲಸವನ್ನು ಅಲ್ಲೇ ಪಕ್ಕದಲ್ಲಿ ಸದಾ ಇರುವ ಪೊಲೀಸರು ಯಾವತ್ತಿಗೂ ಮಾಡಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಬಸ್ ಸ್ಟಾಂಡ್ ಪ್ರವೇಶದ ಬಳಿ ಪ್ರತಿ ಮಳೆಗಾಲದಲ್ಲೂ ಗುಂಡಿ ನಿರ್ಮಾಣವಾಗಲಿದೆ. ಹೀಗೆ ಸ್ವಚ್ಛ ನಗರಿಯ ಮುಖ್ಯ ಬಸ್ ನಿಲ್ದಾಣವೇ ಅನೈರ್ಮಲ್ಯ ಹಾಗೂ ಅವ್ಯವಸ್ಥೆಯ ತಾಣವಾಗಿದ್ದು, ಐದಾರು ವರ್ಷಗಳಿಂದ ಈ ಪರಿಸ್ಥಿತಿ ಮುಂದುವರಿಯುತ್ತಾ ಬಂದಿದೆ.

ಇದೀಗ ಈ ಪೈಕಿ ಒಂದು ಸಮಸ್ಯೆಯನ್ನು ಬಗೆಹರಿಸಲು ಪಾಲಿಕೆ ಮನಸ್ಸು ಮಾಡಿದೆ ಎಂದು ವ್ಯಕ್ತಿಯೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಮಲಬಾರ್ ಎದುರಿನ ಗೋಡೆಗಳಿಗೆ ಗಾಜುಗಳನ್ನು ಅಳವಡಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಮೂಲಕ ಮೂತ್ರ ವಿಸರ್ಜನೆ ಮಾಡುವ ಕಿಡಿಗೇಡಿಗಳಿಗೆ ಬ್ರೇಕ್ ಹಾಕುವ ಉದ್ದೇಶವಿದ್ದು, ಗಾಜಿನ ಕನ್ನಡಿ ಇರುವುದರಿಂದ ಕಾಂಪೌಂಡ್ ಮೇಲೆ ಮೂತ್ರ ವಿಸರ್ಜನೆ ಮಾಡಲು ಸಾಧ್ಯವಿಲ್ಲ ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular