HomeIndiaWatch Video: ಮುಂಬೈ ಲೋಕಲ್ ಟ್ರೈನ್ ನಲ್ಲಿ ಯುವತಿ ಡಾನ್ಸ್; ನೆಟ್ಟಿಗರಿಂದ 'ಮಿಶ್ರ ಪ್ರತಿಕ್ರಿಯೆ'

Watch Video: ಮುಂಬೈ ಲೋಕಲ್ ಟ್ರೈನ್ ನಲ್ಲಿ ಯುವತಿ ಡಾನ್ಸ್; ನೆಟ್ಟಿಗರಿಂದ ‘ಮಿಶ್ರ ಪ್ರತಿಕ್ರಿಯೆ’

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೆಲವರು ಲೈಕ್ಸ್ ಹಾಗೂ ಕಾಮೆಂಟ್ ಗಿಟ್ಟಿಸಿಕೊಳ್ಳಲು ತರಹೇವಾರಿ ಸರ್ಕಸ್ ಮಾಡುತ್ತಿರುತ್ತಾರೆ. ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಗಮನ ಸೆಳೆಯಲು ಯತ್ನಿಸುತ್ತಾರೆ. ಇಂತಹ ಹಲವಾರು ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ.

ಇದೀಗ ಅಂತಹುದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮುಂಬೈ ಲೋಕಲ್ ಟ್ರೈನ್ ನಲ್ಲಿ ಯುವತಿಯೊಬ್ಬಳು ಡಾನ್ಸ್ ಮಾಡಿದ್ದು, ಇದಕ್ಕೆ ಆಕೆಯ ಗೆಳೆಯ ಕೂಡ ಸಾಥ್ ನೀಡಿದ್ದಾನೆ. ರೈಲಿನಲ್ಲಿ ನೃತ್ಯ ಮಾಡುವ ವಿಡಿಯೋಗಳು ಹೊಸದೇನಲ್ಲವಾದರೂ ಈ ಜೋಡಿಯ ವಿಡಿಯೋ ಸಹ ಈಗ ಗಮನ ಸೆಳೆದಿದೆ.

ಭೋಜಪುರಿ ಗೀತೆ ‘ಸಾಜ್ ಕೆ ಸನ್ವಾರ್ ಕೆ’ ಗೆ ಮೊದಲಿಗೆ ಈ ಯುವತಿ ಡಾನ್ಸ್ ಮಾಡಿದ್ದು, ಬಳಿಕ ಈಕೆಯ ಹಿಂದೆ ಕೂತಿದ್ದ ಗೆಳೆಯ ಸಹ ಸೀಟ್ ಮೇಲೆ ಹತ್ತಿ ಸೊಂಟ ಕುಣಿಸಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಿಶ್ರ ಪ್ರತಿಕ್ರಿಯ ವ್ಯಕ್ತವಾಗಿದ್ದು, ಕೆಲವರು ಯುವತಿಯ ಪ್ರತಿಭೆಗೆ ಭೇಷ್ ಎಂದಿದ್ದರೆ ಮತ್ತೆ ಹಲವರು ರೈಲಿನಲ್ಲಿ ನೃತ್ಯ ಮಾಡಿದ ಆಕೆಯ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular