ಬೆಳಗಾವಿ: ಪಶ್ಚಿಮ ಘಟ್ಟ, ಬೆಳಗಾವಿ ಜಿಲ್ಲೆಯ ಭಾಗಗಳಲ್ಲಿ ಮಳೆಯಿಂದಾಗಿ ನದಿಗಳು ಮೈದುಂಬಿ ಹರಿಯುತ್ತಿವೆ. ಅಂತೆಯೇ ತುಂಬಿ ಹರಿಯುತ್ತಿದ್ದ ಘಟಪ್ರಭಾ ನದಿಯ ಸೌಂದರ್ಯ ಸವಿಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೋಕಾಕ್ ನಲ್ಲಿ ನಡೆದಿದೆ.
ಘಟಪ್ರಭಾ ನದಿ ಬಳಿ ತೆರಳಿದ್ದ ಯುವಕ ಕಾಅಲು ಜಾರಿ ನದಿಗೆ ಬಿದ್ದು ನೀರುಪಾಲಾಗಿದ್ದಾನೆ. ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದತೂ ಜಿಲ್ಲಾಡಳಿತದ ಮುನ್ನೆಚ್ಚ್ರಿಕೆ ನೀಡದರೂ ನಿರ್ಲಕ್ಷ ಮಾಡಿ ನದಿ ಬಳಿ ಹೋಗಿ ಯುವಕ ದುರಂತಕ್ಕೀಡಾಗಿದ್ದಾನೆ.
ರಾಜ್ಯ ವಿಪತ್ತು ಸ್ಪಂದನಾ ಪಡೆ ಮತ್ತು ಗೋಕಾಕ್ ಅಗ್ನಿಶಾಮಕ ದಳದೊಂದಿಗೆ ಜಂಟಿಯಾಗಿ ಕಠಿಣ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರತೆಗೆದಿದೆ. ಘಟನ ಅಸ್ಥಳಕ್ಕೆ ಗೋಕಾಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

